Monday, December 23, 2024

ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ, ವರದಕ್ಷಿಣೆಗೆ ಬೇಡಿಕೆಯಿಟ್ಟ ವರ ಜೈಲುಪಾಲು

ಬೆಳಗಾವಿ : ತಾಳಿ ಕಟ್ಟುವ ವೇಳೆ ಕಲ್ಯಾಣ ಮಂಟಪದಲ್ಲೇ ವರದಕ್ಷಿಣೆಗೆ ಬೇಡಿಕೆಯಿಟ್ಟು ಸರ್ಕಾರಿ ನೌಕರನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಹಿಂಡಲಗಾ ಇದೀಗ ಜೈಲುಪಾಲಾಗಿದ್ದಾನೆ. ಈತ ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್‌ಡಿಸಿ ಆಗಿದ್ದ.

ಮದುವೆಯ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ,‌ ಒಂದು ಲಕ್ಷ ರೂ. ನೀಡುವ ಮಾತುಕತೆ ನಡೆದಿತ್ತು. ಆದರೆ, ವರನ ಕಡೆಯವರು 100 ಗ್ರಾಂ ಚಿನ್ನ, 10 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ವಧುವಿನ ಕಡೆಯವರು ಒಪ್ಪದ ಕಾರಣ ಸಚಿನ್ ಮದುವೆ ನಿರಾಕರಿಸಿದ್ದ. ಇದರಿಂದ ಬೆಸತ್ತು ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವಧು ದೂರು ದಾಖಲಾಗಿತ್ತು.

ಮದುವೆ ಮಂಟಪದಲ್ಲಿ ನಡೆದಿದ್ದೇನು?

ಅರಿಶಿಣ ಕಾರ್ಯಕ್ರಮದಲ್ಲಿ 100 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ನೀಡುವಂತೆ ವಧುವಿನ ಪೋಷಕರಿಗೆ ಡಿಮ್ಯಾಂಡ್ ಮಾಡಿದ್ದ. ಸಚಿನ್ ಹೈಡ್ರಾಮಕ್ಕೆ ಮದುವೆಗೆ ಬಂದಿದ್ದ ಸಂಬಂಧಿಕರು ತಬ್ಬಿಬ್ಬಾಗಿದ್ದಾರೆ. ವರದಕ್ಷಿಣೆ ಕೊಡದ ಹಿನ್ನೆಲೆ ಮಂಟಪದಿಂದ ವರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ವರನಿಗೆ ವಧುವಿನ ಕಡೆಯವರು ಧರ್ಮದೇಟು ಕೊಟ್ಟು, ರೂಮ್​ನಲ್ಲಿ ಲಾಕ್ ಮಾಡಿದ್ದಾರೆ. ಬಳಿಕ, ಪೊಲೀಸರು ಆಗಮಿಸಿ ವಶಕ್ಕೆ ಪಡೆದಿದ್ದಾರೆ. ಮೂರು ದಿನಗಳ ಹಿಂದೆ ಮದುವೆ ಮುರಿದುಬಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

RELATED ARTICLES

Related Articles

TRENDING ARTICLES