Tuesday, December 24, 2024

ಜ.7ರಂದು ಬೆಂಗಳೂರಿನಲ್ಲಿ 21ನೇ ಚಿತ್ರಸಂತೆ : ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

ಬೆಂಗಳೂರು : ಜನವರಿ 7ರಂದು ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ 21ನೇ ಚಿತ್ರಸಂತೆ ನಡೆಯಲಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ.ಬಿ.ಎಲ್‌. ಶಂಕರ್ ಅವರು, ಕಳೆದ 2003ರಿಂದ ಸತತವಾಗಿ ಪ್ರತಿ ವರ್ಷವೂ ಚಿತ್ರಸಂತೆಯನ್ನ ನಡೆಸುತ್ತಾ ಬಂದಿದ್ದು, ಈ ವರ್ಷ ಜನವರಿಯ ಮೊದಲ ವಾರ ಅಂದರೆ ಜನವರಿ 7ನೇ ತಾರೀಖು ಚಿತ್ರ ಸಂತೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಚಿತ್ರಸಂತೆ ಅಂಗವಾಗಿ ಜನವರಿ 6ರಂದು ಚಿತ್ರಸಮ್ಮಾನ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದ್ದು, ಚಿತ್ರಜಗತ್ತನಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹಾಗೂ ಜನವರಿ 7ರಂದು ನಡೆಯಲಿರುವ ಚಿತ್ರ ಸಂತೆ ಕಾರ್ಯಕ್ರಮವನ್ನ ಸಿಎಂ ಸಿದ್ದಾರಾಮಯ್ಯ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

2,726 ಕಲಾವಿದರು, 300ಕ್ಕೂ ಹೆಚ್ಚು ಮಳಿಗೆ

ಈ ಬಾರಿ ಚಿತ್ರಸಂತೆಯಲ್ಲಿ 22 ರಾಜ್ಯಗಳ 1,500 ಕಲಾವಿದರ ಕಲಾಕೃತಿಗಳ ಪ್ರದರ್ಶನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಸೇರಿದಂತೆ 2,726 ಕಲಾವಿದರು ಭಾಗಿಯಾಗಲಿದ್ದು, 300ಕ್ಕೂ ಹೆಚ್ಚು ಮಳಿಗೆಗಳು ಚಿತ್ರ ಸಂತೆಯಲ್ಲಿ ಭಾಗಿಯಾಗಲಿವೆ. ಇನ್ನೂ, ಶಿವನಂದಾ ಸರ್ಕಲ್, ಸೇವಾದಳ, ಕುಮಾರ ಕೃಪಾ ರಸ್ತೆ, ಶಿವಾನಂದ ಸರ್ಕಲ್‌ನಿಂದ ಗುರುರಾಜ್ ಕಲ್ಯಾಣ ಮಂಟಪದ ಸ್ಟೀಲ್ ಬ್ರಿಡ್ಜ್ ಕೆಳಗಡೆ ಚಿತ್ರಸಂತೆ ನಡೆಯಲಿದ್ದು, ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದಿಂದ ಬರುವವರಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬೆಳ್ಳಗೆ 8ರಿಂದ ಸಂಜೆ 8 ವರೆಗೆ ಚಿತ್ರಸಂತೆ

ಬೆಳ್ಳಗೆ 8ರಿಂದ ಸಂಜೆ 8 ವರೆಗೆ ಚಿತ್ರಸಂತೆ ನಡೆಯಲಿದೆ. ಪಾರ್ಕಿಂಗ್ ವ್ಯವಸ್ಥೆಗೆ ತೊಂದರೆಯಾಗುವ ಹಿನ್ನೆಲೆ ಮೆಟ್ರೋ ಸ್ಟೇಷನ್‌ನಿಂದ ಫೀಡರ್ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಇಲಾಖೆಯಲ್ಲಿ ಮನವಿ ಮಾಡಿಕೊಂಡಿದ್ದು, ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಡಾ.ಬಿ.ಎಲ್‌. ಶಂಕರ್ ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES