Tuesday, January 7, 2025

ಹೊಸ ವರ್ಷಾಚರಣೆ ಸಂಭ್ರಮದಲ್ಲೇ ಕೊಲೆ : ಕೇಕ್ ತರಲು ಬಂದ ಯುವಕ ಮಸಣಕ್ಕೆ

ಬಳ್ಳಾರಿ : 2024ರ ಹೊರ ವರ್ಷದ ಸಂಭ್ರಮದಲ್ಲಿರುವಾಗಲೇ ಗಣಿ ನಾಡು ಬಳ್ಳಾರಿಯಲ್ಲಿ ನೆತ್ತರು ಹರಿದಿದೆ.

ಬಳ್ಳಾರಿಯ ವಡ್ಡರಬಂಡಿ ಪ್ರದೇಶದಲ್ಲಿ ಯುವಕನೊಬ್ಬನನ್ನು ದುದ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಆರ್.ಕೆ. ಕಲೋನಿಯ ನಿವಾಸಿ ಸೈದುಲ್ಲಾ (24) ಕೊಲೆಯಾದ ವ್ಯಕ್ತಿ. ಬಾಪೂಜಿ ನಗರದ ನಿವಾಸಿ ರಜಾಕ್ ಅಲಿ (26) ಎಂಬಾತನಿಗೆ ಗಂಭೀರ ಗಾಯವಾಗಿದೆ.

ರಾತ್ರಿ ಸುಮಾರು 8.30ರ ಸುಮಾರಿಗೆ ಹೊಸ ವರ್ಷಾಚರಣೆಗೆ ಕೇಕ್ ಖರೀದಿಸಲು ಬೇಕರಿಗೆ ಬಂದಿದ್ದ ಸೈದುಲ್ಲಾ ಹಾಗೂ ಇತರ ಯುವಕರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಸೈದುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನನ್ನು ವಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಬ್ರೂಸ್ ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES