Wednesday, January 22, 2025

ಪ್ರಿಯಾಂಕ್‌ ಖರ್ಗೆಯಂಥ ಚಿಲ್ಲರೆಗಳಿಗೆ ಉತ್ತರ ಕೊಡಲ್ಲ: ಕೆ.ಎಸ್‌. ಈಶ್ವರಪ್ಪ

ಬೆಳಗಾವಿ: ಸಚಿವ ಪ್ರಿಯಾಂಕ್ ಖರ್ಗೆಯಂಥ ಚಿಲ್ಲರೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಕೆ.ಎಸ್ ಈಶ್ವರಪ್ಪ ಅವರು ಪ್ರಿಯಾಂಕ್‌ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ʻʻರಾಮಮಂದಿರ ಆಯ್ತು ರಾಮರಾಜ್ಯ ಆಗೋದು ಯಾವಾಗʼʼ ಎಂಬ ಪ್ರಶ್ನೆ ಕೇಳಿದ್ದ ಪ್ರಿಯಾಂಕ್‌ ಅವರನ್ನು ಚಿಲ್ಲರೆ ಎಂದ ಈಶ್ವರಪ್ಪ, ಅಂಥವರ ಮಾತಿಗೆಲ್ಲ ನಾನು ಉತ್ತರ ಕೊಡೊಲ್ಲ ಎಂದರು.

ʻʻರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಚಾರ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕ ಆಯ್ತು, ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದರು. ಕಾಂಗ್ರೆಸ್‌ನವರು ಬಿಜೆಪಿಯವರು ರಾಮ ಮಂದಿರ ಕಟ್ಟಲ್ಲ ಅಂತಿದ್ದರು.

ಚುನಾವಣೆಯಲ್ಲಿ ಅದೊಂದು ಪ್ರಣಾಳಿಕೆ ಮಾಡ್ಕೊತಾರೆ ಅಷ್ಟೆ ಎಂದಿದ್ದರು. ಈಗ ಪ್ರಿಯಾಂಕ್ ಖರ್ಗೆಯಂತವರು ರಾಮಮಂದಿರ ಕಟ್ಟಾಯ್ತು ರಾಮರಾಜ್ಯ ಯಾವಾಗ ಅಂತಾರೆ. ಚಿಲ್ಲರೆಗಳಿಗೆ ಉತ್ತರ ಕೊಡಬೇಕಿಲ್ಲ,ʼʼ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ತುಂಡುಡುಗೆ ಧರಿಸಿದ್ದಕ್ಕೆ ಪತಿಯಿಂದ ಪತ್ನಿಯ ಕತ್ತುಸೀಳಿ ಮರ್ಡರ್​!

ʻʻಕಾಂಗ್ರೆಸ್‌ನವರು ನೋವು ಮಾಡುವ ವಿಷಯಗಳ ಬಗ್ಗೆ ಮಾತಾಡ್ತಾರೆ. ಪ್ರಪಂಚದಲ್ಲಿ ಭಾರತದ ಸಂಸ್ಕೃತಿ ಬೆಳೆಯಬೇಕು. ಇದು ರಾಮ ಮಂದಿರ ಅಲ್ಲ‌ ರಾಷ್ಟ್ರ ಮಂದಿರʼʼ ಎಂದು ಹೇಳಿದರು ಈಶ್ವರಪ್ಪ.

ʻʻಸಿದ್ದರಾಮಯ್ಯ ಅವರು ಅಹಿಂದ ಅಂತ ಹೋಗ್ತಿದ್ರು. ಊಗ ಹಿಂದುಳಿದವರು, ದಲಿತರು ಕೈ ಬಿಟ್ರು. ಇನ್ನು ಉಳಿದಿದ್ದು ಅಲ್ಪಸಂಖ್ಯಾತರು ಮಾತ್ರ, ಅವರನ್ನೆ ಇಟ್ಕೊಂಡು ರಾಜಕೀಯ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಲೆಕ್ಕ,. ಹೀಗಾಗಿ ದೇಶದ್ರೋಹಿಗಳಿಗೆ ತೃಪ್ತಿ ಆಗೋ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆʼʼ ಎಂದು ಹೇಳಿದರು ಈಶ್ವರಪ್ಪ.

ʻʻರಾಮಮಂದಿರ ಆಗಬಾರದು ಎಂದು ಕೋರ್ಟಿಗೆ ಹೋದವರು ಕೂಡಾ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುಷ್ಪ ವೃಷ್ಟಿ ಮಾಡಿದ್ದಾರೆ. ರಾಮಮಂದಿರ ಕಟ್ಟಿದ್ದು ಒಳ್ಳೆಯದ್ದು ಎಂದು ಹೇಳಿದ್ದಾರೆ. ಆದರೆ, ಹಿಂದೂ-ಮುಸ್ಲಿಂ ಒಟ್ಟಾಗಬಾರದು ಎನ್ನುವುದು ಕಾಂಗ್ರೇಸ್ ಮತ್ತು ಸಿದ್ದರಾಮಯ್ಯ ಉದ್ದೇಶʼʼ ಎಂದು ವಿವರಿಸಿದರು.

 

 

RELATED ARTICLES

Related Articles

TRENDING ARTICLES