Monday, December 23, 2024

ಕಿರಿಕ್ ಪಾರ್ಟಿಗೆ 7 ವರ್ಷ : ರಶ್ಮಿಕಾ ಇಲ್ಲದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ

ಬೆಂಗಳೂರು : ಡಿಸೆಂಬರ್ 30, 2016. ಇದೇ ದಿನ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಅನೇಕರಿಗೆ ಹೊಸ ಜೀವನವನ್ನು ಕೊಟ್ಟ ದಿನವಿದು.

ಹೌದು, ಸ್ಯಾಂಡಲ್​ವುಡ್​ನಲ್ಲಿ ಹಲವು ದಾಖಲೆ ನಿರ್ಮಿಸಿದ ಕಿರಿಕ್ ಪಾರ್ಟಿ ಸಿನಿಮಾ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಸಂತೋಷವನ್ನು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ನಮ್ಮ ಕಿರಿಕ್ ಪಾರ್ಟಿಗೆ 7ರ ಹರುಷ. ಈ ಪ್ರಯಾಣಕ್ಕೆ ನಾನು ಸದಾ ಚಿರರುಣಿ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ನಟ ರಶ್ಮಿಕಾ ಮಂದಣ್ಣ ಇಲ್ಲದ ಚಿತ್ರದ ಫೋಟೋವನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಏಳು ವರ್ಷಗಳ ಹಿಂದೆ ಕನ್ನಡದಲ್ಲಿ ಒಂದು ಸೂಪರ್ ಆಗಿರೋ ಕಾಲೇಜು ಲವ್ ಸ್ಟೋರಿ ಬಿಡುಗಡೆಯಾಗಿತ್ತು. ಸರಳ ಕಥೆ, ಸರಳ ನಟನೆ, ಕಾಮಿಡಿ, ಲವ್, ಫ್ರೆಂಡ್‌ಶಿಪ್, ಕಾಲೇಜು, ಕ್ಯಾಂಪಸ್‌ಗಳ ಸುತ್ತ ಇದ್ದ ಸಿನಿಮಾ ‘ಕಿರಿಕ್ ಪಾರ್ಟಿ’ ಬಿಡುಗಡೆಯಾಗಿತ್ತು. ಈ ಸಿನಿಮಾಕ್ಕೆ ಜನರು ಕೊಟ್ಟ ಪ್ರೀತಿ ಕೂಡ ಹೆಚ್ಚು. ಕನ್ನಡಕ್ಕೆ ಮತ್ತಷ್ಟು ಹೊಸಬರನ್ನು ಪರಿಚಯಿಸಿದ ಕೀರ್ತಿ ಕೂಡ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಸಲ್ಲುತ್ತದೆ.

2016 ಡಿಸೆಂಬರ್ 30ರಂದು ಬಿಡುಗಡೆ

ಕಿರಿಕ್ ಪಾರ್ಟಿ 2016ರ ಡಿಸೆಂಬರ್ 30ರಂದು ಬಿಡುಗಡೆ ಆಗಿತ್ತು. ಸಿನಿಮಾ ತೆರೆ ಕಂಡು 7 ವರ್ಷಗಳೇ ಆಗಿವೆ. ಪರಂವಃ ಸ್ಟುಡಿಯೋಸ್‌ ಹಾಗೂ ಪುಷ್ಕರ್‌ ಫಿಲ್ಮ್ಸ್‌ ಬ್ಯಾನರ್‌ ಅಡಿ ಈ ಚಿತ್ರವನ್ನು ಜಿ.ಎಸ್.ಗುಪ್ತಾ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದರು. ರಿಷಬ್‌ ಶೆಟ್ಟಿ ನಿರ್ದೇಶನ ಮಾಡಿದ್ದರು. ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಕಾಂಬಿನೇಷನ್​ನಲ್ಲಿ ಈ ರೀತಿಯ ಸಿನಿಮಾ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

RELATED ARTICLES

Related Articles

TRENDING ARTICLES