Sunday, December 22, 2024

ಮೌನಂ ಸಮ್ಮತಿ ಲಕ್ಷಣಂ.. ಯತ್ನಾಳ್ ಸರಿ ಹೋಗಿದ್ದಾರೆ : ರೇಣುಕಾಚಾರ್ಯ

ದಾವಣಗೆರೆ : ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಿದೆ.. ಶಾಸಕ ಯತ್ನಾಳ್ ಸರಿ ಹೋಗಿದ್ದಾರೆ. ನಿನ್ನೆ ವಿಜಯಪುರದಲ್ಲಿ ನಡೆದ ಕಾರ್ಯಕ್ರಮ ಸರಾಗವಾಗಿ ನಡೆದಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಂದೇ ಎಲ್ಲಾ ಲೆಕ್ಕ ಕೊಟ್ಟಿದ್ದಾರೆ ಎಂದು ಯತ್ನಾಳ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆ ನಡೆದಿದೆ. ಮಾಸ್ಕ್, ಆಕ್ಸಿಜನ್ ಲೆಕ್ಕಾ ಎಲ್ಲಾ ಕೊಟ್ಟಿದ್ದಾರೆ. ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆಯೇ ಲೆಕ್ಕ ಕೊಡಲಾಗಿದೆ. ಗಾಳಿಯಲ್ಲಿ ಗುಂಡು ಹೋಡೆಯೋದು ಸರಿಯಲ್ಲ ಎಂದು ರೇಣುಕಾಚಾರ್ಯ ಕುಟುಕಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಹಿಂದೂ ಸಮಾಜ ಮಸೀದಿಗಳನ್ನ ಒಡೆದು ಪುಡಿ ಪುಡಿ ಮಾಡುತ್ತೆ : ಈಶ್ವರಪ್ಪ

ಕಾಂಗ್ರೆಸ್ ಜೊತೆ ಹೊಂದಾಣಿಕೆ ಸರಿಯಲ್ಲ

ಕಾಂಗ್ರೆಸ್ ಜೊತೆ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡು ಮಾತನಾಡುವುದು ಸರಿಯಲ್ಲ. ಯತ್ನಾಳ್ ಕೊರೋನಾ ಸಮಯದಲ್ಲಿ ಶಾಸಕರಾಗಿದ್ದರು. ಆರೋಪ ಮಾಡೋದಿದ್ರೆ, ಆವಾಗ ಆರೋಪ ಮಾಡಬಹುದಿತ್ತು. ಎಲ್ಲದಕ್ಕೂ ದಾಖಲೆಗಳಿವೆ, ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES