ಬೆಂಗಳೂರು : ಒಡಿಶಾ, ಬಿಹಾರದಿಂದ ರೈಲಿನಲ್ಲಿ ಗಾಂಜಾ ತಂದಿದ್ದ 7 ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 60 ಲಕ್ಷ ರೂ. ಮೌಲ್ಯದ 60 ಕೆ. ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ನಗರಕ್ಕೆ ಗಾಂಜಾ ಸರಬರಾಜಾಗುತ್ತಿರು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ರೈಲ್ವೇ ಪೊಲೀಸರು ಪ್ರತ್ಯೇಕ ತಂಡಗಳು ವಿಶೇಷ ಕಾರ್ಯಾಚರಣೆ ಕೈಗೊಂಡು ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದಿಂದ ಬರುವ ಪ್ರಶಾಂತಿ ಎಕ್ಸ್‌ಪ್ರೆಸ್, ಶಾಲಿಮಾರ್ ವಾಸ್ಕೋ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ತಪಾಸಣೆ ನಡೆಸಿದಾಗ ಟ್ರಾಲಿ ಬ್ಯಾಗ್‌ಗಳಲ್ಲಿ ಗಾಂಜಾ ತಂದಿದ್ದ ಏಳು ಮಂದಿ ಸಿಕ್ಕಿಬಿದ್ದರು.
ಇದನ್ನೂ ಓದಿ: ಆಹ್ವಾನವಿಲ್ಲದ ಮದುವೆ ಕಾರ್ಯಕ್ರಮಗಳಿಗೆ ಹೋದರೆ ಜೈಲೂಟ ಗ್ಯಾರಂಟಿ!
ಬಂಧಿತರನ್ನು ಒಡಿಶಾ ಮೂಲದ ನಿತ್ಯಾನಾನದ್ ದಾಸ್ (37), ನಿಕೇಶ್ ರಾಣಾ (23), ಸಾಗರ್ ಕನ್ಹರ್ (19), ಬೈಕುಂಠಾ ಕನ್ಹರ್ (20), ಜಲಂಧರ್ ಕನ್ಹರ್ (18), ತ್ರಿಪುರಾದ ರಾಜೇಶ್ ದಾಸ್ (25), ಬಿಹಾರದ ಅಮರ್‌ಜಿತ್ ಕುಮಾರ್ (23) ಬಂಧಿತರು ಎಂದು ತಿಳಿದು ಬಂದಿದೆ. ಇವರ ವಿರುದ್ಧ ಬೈಯಪ್ಪನಹಳ್ಳಿ, ಹುಬ್ಬಳ್ಳಿ, ಬೆಂಗಳೂರು ಗ್ರಾಮಾಂತರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.