Monday, December 23, 2024

ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಯುವಕ ಸಾವು

ಮಧ್ಯಪ್ರದೇಶ : ನೋಡ್ರಿ ವಿಧಿ ಅನ್ನೋದು ಎಷ್ಟು ಕ್ರೂರಿ. ಆತ ಸ್ನೇಹಿತರ ಜೊತೆ ಖುಷಿಯಿಂದಲೇ ಕ್ರಿಕೆಟ್ ಆಡುತ್ತಿದ್ದ. ಈ ವೇಳೆ ದಿಢೀರನೆ ನೆಲಕ್ಕೆ ಕುಸಿದು ಬಿದ್ದವ ಮತ್ತೆ ಮೇಲೆ ಏಳಲೇ ಇಲ್ಲ.

ಹೌದು, ಕ್ರಿಕೆಟ್ ಆಡುವಾಗ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್​ ಜಿಲ್ಲೆಯಲ್ಲಿ ನಡೆದಿದೆ.

ಇಂದಾಲ್ ಸಿಂಗ್ ಜಾದವ್ (22) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಬಾಲವಾಡ್ ವ್ಯಾಪ್ತಿಯ ಕಾಟ್​ಕೂಟ್​ನಲ್ಲಿ ಕ್ರಿಕೆಟ್ ಟೂರ್ನಿಮೆಂಟ್ ಆಡುವ ವೇಳೆ ಇಂದಾಲ್ ಬೌಲಿಂಗ್ ಮಾಡುತ್ತಿದ್ದ. ಈ ವೇಳೆ ದಿಢೀರನೆ ಕುಸಿದು ಬಿದ್ದಿದ್ದಾನೆ.

ಕೂಡಲೇ ಸ್ನೇಹಿತರು ಇಂದಾಲ್​ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದಾನೆ. ತೀವ್ರ ಹೃದಯಾಘಾತದಿಂದ ಇಂದಾಲ್ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES