ಅಯೋಧ್ಯೆ : ಜನವರಿ 22 ದೇಶದ ಪ್ರತಿ ಮನೆಯಲ್ಲೂ ಶ್ರೀರಾಮಜ್ಯೋತಿ ಬೆಳಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಸೇರಿದಂತೆ ಬರೋಬ್ಬರಿ 11,100 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
ಇಂದು ಇಡೀ ವಿಶ್ವವೇ ಜನವರಿ 22ರ ಐತಿಹಾಸಿಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ. ಹೀಗಿರುವಾಗ ಅಯೋಧ್ಯೆಯ ಜನರಲ್ಲಿ ಈ ಉತ್ಸಾಹ ಸಹಜ. ನಾನು ಭಾರತದ ಮಣ್ಣಿನ ಪ್ರತಿಯೊಂದು ಕಣದ ಆರಾಧಕ. ಭಾರತದ ಜನರ ಆರಾಧಕ ಹಾಗೂ ನಾನು ನಿಮ್ಮಂತೆಯೇ ಕುತೂಹಲ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ದೀಪಾವಳಿ ಆಚರಿಸಿ, ಸಂಭ್ರಮಿಸಿ
ದೇಶಕ್ಕಾಗಿ ಹೊಸ ಸಂಕಲ್ಪ ಮಾಡೋಣ. ಜನವರಿ 22ರಂದು ಎಲ್ಲ ಜನರು ಅಯೋಧ್ಯೆಗೆ ಬರುವುದು ಬೇಡ. ಬದಲಾಗಿ, 140 ಕೋಟಿ ದೇಶವಾಸಿಗಳು ಜ.22ರಂದು ತಮ್ಮ ತಮ್ಮ ಮನೆಗಳಲ್ಲಿ ಶ್ರೀರಾಮಜ್ಯೋತಿ ಬೆಳಗಬೇಕು ಹಾಗೂ ದೀಪಾವಳಿಯನ್ನು ಆಚರಿಸಿ, ಸಂಭ್ರಮಿಸಬೇಕು. ಜನವರಿ 23ರಿಂದ ಎಲ್ಲರೂ ಶ್ರೀರಾಮನ ದರ್ಶನ ಪಡೆಯಬಹುದು. ಅದಕ್ಕಾಗಿ ರೈಲು, ವಿಮಾನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಜ.14ರಿಂದ 22 ರವರೆಗೆ ಸ್ವಚ್ಛತಾ ಅಭಿಯಾನ
ನಾನು ದೇಶದ ಎಲ್ಲಾ ಯಾತ್ರಾ ಕ್ಷೇತ್ರಗಳು ಮತ್ತು ದೇವಸ್ಥಾನಗಳಿಗೆ ವಿನಂತಿಸುತ್ತೇನೆ. ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ, ಜನವರಿ 14ರಂದು ಮಕರ ಸಂಕ್ರಾಂತಿಯ ದಿನದಿಂದ ದೇಶದ ಎಲ್ಲಾ ಯಾತ್ರಾಸ್ಥಳಗಳಲ್ಲಿ ಸ್ವಚ್ಛತೆಯ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಜನವರಿ 14ರಿಂದ ಜನವರಿ 22 ರವರೆಗೆ ಪ್ರತಿ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
22 जनवरी के लिए सभी रामभक्तों से प्रधान सेवक @narendramodi ने की ये अपील….
पूरा वीडियो देखें: https://t.co/QevqDsbu40 pic.twitter.com/DwzQkakynf
— BJP (@BJP4India) December 30, 2023