Friday, November 22, 2024

ಬಿಎಂಟಿಸಿ ಚಾಲಕರು, ನಿರ್ವಾಹಕರ ಮೇಲಿನ ಕೇಸ್‌ಗಳು ಖುಲಾಸೆ!

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿ ಮೇಲೆ ನಿಗಮದಲ್ಲಿ ದಾಖಲಾದ ಎಲ್ಲಾ ಕೇಸ್‌ಗಳನ್ನು ಖುಲಾಸೆಗೊಳಿಸುವ ಮೂಲಕ ಸಿಬ್ಬಂದಿಗೆ ಸರ್ಕಾರ ಹೊಸ ವರ್ಷದ ಉಡುಗೊರೆ ನೀಡಿದೆ.

ಬಿಎಂಟಿಸಿಯಲ್ಲಿ ಬಹಳ ವರ್ಷಗಳಿಂದಲೂ ಡಿಪೋ ಮ್ಯಾನೇಜರ್‌ಗಳ ಕಿರುಕುಳ, ಸಣ್ಣಪುಟ್ಟ ಪ್ರಕರಣಗಳಿಗೂ ಕೇಸ್ ದಾಖಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಬಾರಿ ಸಿಬ್ಬಂದಿ ಮೇಲೆ ದಾಖಲಾದ ಒಟ್ಟು 6,960 ಕೇಸ್‌ಗಳನ್ನು ಖುಲಾಸೆ ಮಾಡುತ್ತಿದೆ. ಬಸ್‌ಗಳ ಕಾರ್ಯಾಚರಣೆ, ಮಾನವ ಸಂಪನ್ಮೂಲ ಸದ್ಬಳಕೆಯಿಂದ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಇದನ್ನೂ ಓದಿ: ದಟ್ಟ ಮಂಜು ಹಿನ್ನೆಲೆ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ!

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ಬರೋ 26 ಗೈರು ಹಾಜರಿ ಪ್ರಕರಣ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳು ಖುಲಾಸೆಯಾಗುತ್ತಿವೆ. ಇದರಲ್ಲಿ ಸಸ್ಪೆಂಡ್ ಆಗಿ ರಿವೋಕ್ ಆದ ಪ್ರಕರಣಗಳೂ ಸೇರಿವೆ. ಹಾಗೆಯೇ ಡಿಪೋಗಳಲ್ಲಿ ದಾಖಲಾದ ಒಟ್ಟು 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳು ಸೇರಿ ಒಟ್ಟು 6,416 ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ.

RELATED ARTICLES

Related Articles

TRENDING ARTICLES