Monday, December 23, 2024

‘ಕಾಟೇರ’ ಚಿತ್ರ ಗೆಲ್ಲಿಸಿದ ಸೆಲೆಬ್ರೆಟಿಸ್​ಗೆ ‘ಧನ್ಯೋಸ್ಮಿ’ : ನಟ ದರ್ಶನ್ ಟ್ವೀಟ್

ಬೆಂಗಳೂರು : ನಟ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೂಳೆಬ್ಬಿಸಿದೆ. ಈ ಅಭೂತಪೂರ್ವ ಗೆಲುವಿನ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾಟೇರ ಚಿತ್ರವನ್ನು ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿರುವ ಅಭಿಮಾನಿಗಳಿಗೆ ನಟ ದರ್ಶನ್ ಧನ್ಯವಾದ ಅರ್ಪಿಸಿದ್ದಾರೆ. ನನಗೆ ಮಾತೇ ಬರುತ್ತಿಲ್ಲ. ಕಾಟೇರ ಚಿತ್ರವನ್ನು ಅಪ್ಪಿ, ಒಪ್ಪಿ ಗೆಲ್ಲಿಸಿದ ಸೆಲೆಬ್ರೆಟಿಸ್​ಗಳಿಗೆ ಧನ್ಯೋಸ್ಮಿ ಎಂದು ಪೋಸ್ಟ್​ ಮಾಡಿದ್ದಾರೆ.

‘ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ. ಧನ್ಯೋಸ್ಮಿ ಸೆಲೆಬ್ರಿಟಿಸ್..! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ’ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ರಾಜ್ಯಾದ್ಯಂತ ರಿಲೀಸ್​ ಆಗಿರುವ ಕಾಟೇರ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ರವಾಗುತ್ತಿದೆ. ‘ಗುರು ಕಾಟೇರ ಸೂಪರ್ ಆಗಿದೆ. ಡಿ ಬಾಸ್​ಗೆ ಇರುವ ಕ್ರೇಜ್​ ಯಾರಿಗೂ ಬರಲ್ಲ. ಜಾತಿ, ಮತ ಅನ್ನೋರು ಈ ಸಿನಿಮಾ ನೋಡಿ’ ಎಂದು ದರ್ಶನ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮೊದಲ ದಿನವೇ 19.79 ಕೋಟಿ ಕಲೆಕ್ಷನ್

ಕಾಟೇರ್ ಸಿನಿಮಾ ಮೊದಲ ದಿನವೇ ಬಾಕ್ಸ್​ ಆಫೀಸ್​ ಉಡೀಸ್​ ಮಾಡಿದೆ. ಈ ಹಿಂದಿನ ಕ್ರಾಂತಿ ಹಾಗೂ ರಾಬರ್ಟ್​ ಸಿನಿಮಾದ ದಾಖಲೆಯನ್ನು ಸ್ವತಃ ದರ್ಶನ್ ಅವರೇ ಅಳಿಸಿ ಹಾಕಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡ ಕಾಟೇರ ಚಿತ್ರ ಮೊದಲ ದಿನ 19.79 ಕೋಟಿ ರೂ. ಕಲೆಕ್ಷನ್ ಮಾಡಿದೆ. ಉತ್ತಮ ಕಥೆ ಹೊಂದಿರುವ ಕಾಟೇರ ಚಿತ್ರದಲ್ಲಿ ನಟ ದರ್ಶನ್ ಎರಡು ಪಾತ್ರಗಳಲ್ಲಿ ನಟಿಸಿ ಫುಲ್ ಮಾರ್ಕ್ಸ್​ ಗಿಟ್ಟಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಪುತ್ರಿ ಆರಾಧನಾ ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಕಂಡಿದ್ದಾರೆ.

RELATED ARTICLES

Related Articles

TRENDING ARTICLES