ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ಆಡಳಿತ ವಿಭಾಗಕ್ಕೆ ಚುರುಕು ಮುಟ್ಟಿಸಲು ಮೇಜರ್ ಸರ್ಜರಿ ಮಾಡಿದೆ.
ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ, ಹೊಸ ವರ್ಷಕ್ಕೆ ಗಿಫ್ಟ್ ನೀಡಿದೆ.
ಕಮಲ್ ಪಂಥ್ ಅವರನ್ನು ಡಿಜಿಪಿ ನೇಮಕಾತಿ ವಿಭಾಗಕ್ಕೆ ನೇಮಿಸಿದೆ. ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರೋಡ್ ಸೇಫ್ಟಿ (ರಸ್ತೆ ಸುರಕ್ಷಾ ವಿಭಾಗ) ವಿಭಾಗದ ಸ್ಪೆಷಲ್ ಕಮಿಷನರನ್ನಾಗಿ ಮಾಡಿದೆ. ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿಎಂಟಿಎಫ್ಗೆ ವರ್ಗಾವಣೆ ಮಾಡಿದೆ.
ಯಾರು ಎಲ್ಲಿಗೆ ಎತ್ತಂಗಡಿ?
ಹರಿಶೇಖರನ್ ಅವರನ್ನು ಹೋಂಗಾರ್ಡ್ ಹಾಗೂ ಸಿವಿಲ್ ಡಿಫೆನ್ಸ್ ಎಡಿಜಿಪಿಯಾಗಿ, ನಂಜುಂಡಸ್ವಾಮಿ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆ ಎಡಿಜಿಪಿಯಾಗಿ, ಚಂದ್ರಗುಪ್ತಾ(ಐಜಿಪಿ) ಅವರನ್ನು ಬೆಂಗಳೂರು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿದೆ.
ತ್ಯಾಗರಾಜನ್ ಅವರನ್ನು ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ, ಅಮಿತ್ ಸಿಂಗ್ ಅವರನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ, ರವಿಕುಮಾರ್ ಅವರನ್ನು ಇಂಟಲಿಜೆನ್ಸ್ ಡಿಐಜಿಯಾಗಿ ನೇಮಕ ಮಾಡಿದ್ದು, ಒಟ್ಟು 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.