Thursday, December 19, 2024

ಭಾರತಕ್ಕೆ ಸೋಲು.. ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ ವನಿತೆಯರು

ಬೆಂಗಳೂರು : ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ವಿರೋಚಿತ ಸೋಲು ಕಂಡಿತು.

ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ಆಸ್ಟ್ರೇಲಿಯಾ ತಂಡ ನೀಡಿದ್ದ 259 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಹರ್ಮನ್​ಪ್ರೀತ್ ಕೌರ್ ಬಳಗ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 255 ರನ್​ಗಳಿಸಿತು. ಈ ಮೂಲಕ 3 ರನ್​ಗಳ ಸೋಲು ಅನುಭವಿಸಿತು.

ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 2 ಪಂದ್ಯ ಗೆದ್ದು, ಇನ್ನು ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಗೆದ್ದು ಬೀಗಿತು. ಭಾರತದ ಪರ ರಿಚಾ ಘೋಷ್ 96, ಜೆಮಿರಾ ರಾಡ್ರಿಗಸ್44, ಸ್ಮೃತಿ ಮಂದಾನ 34, ದೀಪ್ತಿ ಶರ್ಮಾ ಅಜೇಯ 24 ರನ್ ಗಳಿಸಿದರು. ಆಸಿಸ್ ಪರ ಸದರ್ಲ್ಯಾಂಡ್ 3​, ವೇರ್​ಹ್ಯಾಮ್ 2, ಗಾರ್ಡ್ನರ್​, ಅಲಾನಾ ಕಿಂಗ್ ಹಾಗೂ ಕಿಮ್ ಗಾರ್ತ್ ತಲಾ ಒಂದು ವಿಕೆಟ್ ಪಡೆದರು.

5 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ ಲಿಚ್​ಫೀಲ್ಡ್​ 63, ಪೆರ್ರಿ 50, ಕಿಂಗ್ 28, ಮೆಕ್​ಗ್ರಾತ್ 24, ಸದರ್ಲ್ಯಾಂಡ್ 23, ಜಾರ್ಜಿಯಾ 22 ರನ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಮಿಂಚಿದರು. ಪೂಜಾ, ಶ್ರೇಯಾಂಕ ಹಾಗೂ ಸ್ನೇಹ ರಾಣ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES