Wednesday, January 22, 2025

Lovers Death: ವಿವಾಹಿತೆಯೊಂದಿಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕೋಲಾರ : ಒಂದೇ ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತೆ ಹಾಗೂ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎಸ್ ಜಿಡಿಮಾಕಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನುಸೂಯ (35), ವಿಜಯ್ ಕುಮಾರ್ (27) ಮೃತರು.

ಇವರಿಬ್ಬರು ಗ್ರಾಮದ ಹೊರವಲಯದ ಕೆರೆ ಅಂಗಳದಲ್ಲಿದ್ದ ಹೊಂಗೆ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಸೂಯ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ, ವಯಸ್ಸಿನಲ್ಲಿ ತನಗಿಂತ 8 ವರ್ಷ ಚಿಕ್ಕವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹಿಂದೊಮ್ಮೆ ಇವರಿಬ್ಬರು ಮನೆ ಬಿಟ್ಟು ಓಡಿ ಹೋದಾಗ ಕುಟುಂಬಸ್ಥರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇವರಿಬ್ಬರನ್ನು ಹುಡುಕಿ ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದರು.

 

 

ಈ ವೇಳೆ ಇಬ್ಬರಿಬ್ಬರ ಪ್ರೀತಿಯಾಟ ಬಯಲಾಗಿತ್ತು. ಹಲವು ಬಾರಿ ರಾಜಿ ಪಂಚಾಯತಿಯನ್ನು ಕುಟುಂಬಸ್ಥರು ಮಾಡಿದ್ದರು. ಆದರೆ ಯುವಕನ ಮೋಹಪಾಶಕ್ಕೆ ಬಿದ್ದ ಅನುಸೂಯ ಮತ್ತೆ ತನ್ನ ಗಂಡ- ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಓಡಿ ಹೋಗಿದ್ದಳು. ಬಳಿಕ ಮತ್ತೆ ರಾಜಿ ಪಂಚಾಯತಿ ನಂತರ ಅನುಸೂಯ ತವರು ಮನೆ ಸೇರಿದ್ದಳು. ಇತ್ತ ವಿಜಯ್‌ ಕುಮಾರ್‌ ಮದನಪಲ್ಲಿಯಲ್ಲಿ ಇರುವ ಮಾವನ ಮನೆ ಸೇರಿದ್ದಾರೆ. 

ಕಳೆದ ಎರಡು ದಿನಗಳ ಹಿಂದೆ ವಿಜಯ್‌ಕುಮಾರ್‌ ತನ್ನ ತಾಯಿಗೆ ಹಾವು ಕಚ್ಚಿದೆಯೆಂದು ಮದನಪಲ್ಲಿಯಿಂದ ಬಂದಿದ್ದ. ಆದರೆ ತಾಯಿ ನೋಡಲು ಬಂದವನು ಪ್ರೇಯಸಿಯ ಜತೆಗೆ ಒಟ್ಟಿಗೆ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳೀಯರು ಇಬ್ಬರ ಮೃತದೇಹವನ್ನು ಕಂಡು ರಾಯಲ್ಪಾಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮರದಿಂದ ಮೃತದೇಹಗಳನ್ನು ಇಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ತಾಯಿ ಪ್ರೀತಿಗೆ ಪುಟ್ಟ ಮಕ್ಕಳಿಬ್ಬರು ಅನಾಥರಾದರೆ, ಮಗನನ್ನು ಕಳೆದುಕೊಂಡ ವೃದ್ಧ ತಂದೆ-ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ರಾಯಲ್ಪಾಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES