Sunday, December 22, 2024

40 ಸಾವಿರ ಕೋಟಿಯಲ್ಲಿ ದೆಹಲಿ ನಾಯಕರ ಪಾಲೆಷ್ಟು? : ವಿಜಯೇಂದ್ರ ಕಾಲೆಳೆದ ಕಾಂಗ್ರೆಸ್

ಬೆಂಗಳೂರು : ಮಾಜಿ ಶ್ಯಾಡೋ ಸಿಎಂ ಬಿ.ವೈ. ವಿಜಯೇಂದ್ರ ಅವರೇ, 40 ಸಾವಿರ ಕೋಟಿಯಲ್ಲಿ ಬಿಜೆಪಿಯ ದೆಹಲಿ ನಾಯಕರಿಗೆ ಪಾಲೆಷ್ಟು? ರಾಜ್ಯದ ನಾಯಕರ ಪಾಲೆಷ್ಟು? ಎಂದು ಕಾಂಗ್ರೆಸ್​ ಕುಟುಕಿದೆ.

ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್​, ಹೆಣದಿಂದ ಸಂಪಾದಿಸಿದ ಈ ಪಾಪದ ಹಣದಿಂದ ಮಾಲ್ಡಿವ್ಸ್ ನಲ್ಲಿ ತಾವು ಹೂಡಿಕೆ ಮಾಡಿದ್ದೆಷ್ಟು? ಪಾಲುದಾರರು ಯಾರಿದ್ದಾರೆ? ಅಮೆರಿಕಾದಲ್ಲಿ ಖರೀದಿಸಿದ ಮನೆಗಳೆಷ್ಟು? ಫಾರ್ಮ್ ಲ್ಯಾಂಡ್‌ಗಳೆಷ್ಟು? ದುಬೈನಲ್ಲಿ ಮಾಡಿದ ಆಸ್ತಿಗಳೆಷ್ಟು? ಎಂದು ಪ್ರಶ್ನಿಸಿದೆ.

ಹೆಣದಲ್ಲಿ ಹಣ ಮಾಡಿದ ಹಿಂದಿನ ಬಿಜೆಪಿ ಸರ್ಕಾರ ಒಬ್ಬೊಬ್ಬ ಸೋಂಕಿತನಿಗೂ 8 ರಿಂದ 10 ಲಕ್ಷ ಬಿಲ್ ತೋರಿಸಿದೆ ಎಂಬ ಸಂಗತಿ ಬಿಜೆಪಿಗರಿಂದಲೇ ಬಯಲಾಗಿದೆ. ವಿಜಯೇಂದ್ರ ಅವರೇ, ನಿಜಕ್ಕೂ ಒಬ್ಬ ಸೋಂಕಿತನಿಗೆ ಇಷ್ಟು ಖರ್ಚಾಗುತ್ತದೆಯೇ? ರಾಜ್ಯದ ಜನತೆ ಕರೋನಾದಿಂದ ಭಯಭೀತರಾಗಿದ್ದಾಗ ತಾವು ಲೂಟಿಯಲ್ಲಿ ಮಗ್ನರಾಗಿದ್ದಿರಾ? ಎಂದು ವಾಗ್ದಾಳಿ ನಡೆಸಿದೆ.

ಮಾತಾಡಿ ವಿಜಯೇಂದ್ರ ಮಾತಾಡಿ

ವಿಜಯೇಂದ್ರ ಅವರೇ, 40 ಸಾವಿರ ಕೋಟಿ ಲೂಟಿಯ ಆರೋಪ ಬಂದಿದ್ದರೂ ಗಾಢಮೌನಕ್ಕೆ ಜಾರಿರುವುದೇಕೆ? ಬೇರೆಲ್ಲದಕ್ಕೂ ಮಾತನಾಡುವ ಬಿ.ಎಸ್. ಯಡಿಯೂರಪ್ಪ ಅವರು ಈ ಆರೋಪದ ಬಗ್ಗೆ ಮೌನವ್ರತ ಕೈಗೊಂಡಿರುವುದೇಕೆ? ಈ “ಮೌನ”ವು ಹೆಣದ ಮೇಲೆ ನಿಂತು ಹಣ ಎಣಿಸುತ್ತಾ 40 ಸಾವಿರ ಕೋಟಿಯ ಲೂಟಿ ಹೊಡೆದಿದ್ದನ್ನು ಒಪ್ಪಿಕೊಳ್ಳುತ್ತಿರುವ ಸೂಚನೆಯೇ? ಮಾತಾಡಿ ವಿಜಯೇಂದ್ರ ಮಾತಾಡಿ! ಎಂದು ಚಾಟಿ ಬೀಸಿದೆ.

RELATED ARTICLES

Related Articles

TRENDING ARTICLES