Saturday, January 18, 2025

ಯುವತಿಗೆ ಕಿರುಕುಳ : ಚಪಲ ಚೆನ್ನಿಗರಾಯನಿಗೆ ರಸ್ತೆಯಲ್ಲೇ ಬಿತ್ತು ಧರ್ಮದೇಟು

ಕಾರ್ಕಳ : ಖಾಸಗಿ ಪೈನಾನ್ಸ್ ಒಂದರಲ್ಲಿ ಅಕೌಂಟೆಂಟ್ ಆಗಿದ್ದ ಯುವತಿಗೆ ವ್ಯಕ್ತಿಯೊಬ್ಬ ವಿನಾಕಾರಣ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಮುಖಕ್ಕೆ ಮಂಗಳಾರತಿ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಇರ್ವತ್ತೂರಿನ ಜಗದೀಶ್ ಪೂಜಾರಿ ಎಂಬಾತನೇ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಆಸಾಮಿ. ಈತ ಕಳೆದ ಹಲವು ದಿನಗಳಿಂದ ಕಾರ್ಕಳದ ಫೈನಾನ್ಸ್ ನಲ್ಲಿ ಅಕೌಂಟೆಂಟ್ ಆಗಿದ್ದ ನಂದಳಿಕೆ ಗ್ರಾಮದ ಯುವತಿಯನ್ನು‌ ಪದೇ ಪದೆ ಹಿಂಬಾಲಿಸಿ ಅಡ್ಡಗಟ್ಟಿ ಮಾತನಾಡಿಸಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಬುಧವಾರ ಸಂಜೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ. ಈ ವೇಳೆ ಸ್ಥಳೀಯರು ಚಪಲ ಚೆನ್ನಿಗರಾಯನನ್ನು ಹಿಡಿದು ಕಾರ್ಕಳ ಬಸ್ ನಿಲ್ದಾಣದಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಬೈದು, ಧರ್ಮದೇಟು ಕೊಟ್ಟಿದ್ದಾರೆ.

ಈ ಘಟನೆಯ ಬಳಿಕ ಯುವತಿ ಈತನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ‌ ಜಗದೀಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES