Monday, December 23, 2024

ಅಂಗಡಿ,ಮಾಲ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ: ಶೀಘ್ರವೇ ಸುಗ್ರೀವಾಜ್ಞೆ

ಬೆಂಗಳೂರು: ಅಂಗಡಿ, ಮಾಲ್‌ಗಳ ನಾಮಫಲಕಗಳು ಕನ್ನಡ ಭಾಷೆಯಲ್ಲೇ ಇರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

ಕನ್ನಡ ನಾಮಫಲಕ ಅಳವಡಿಸುವ ಸಬಂಧ ಬಗ್ಗೆ ಚರ್ಚೆ ನಡೆಸಿ ಮಾತನಾಡಿದ ಅವರು,ಅಧಿವೇಶನ ಇಲ್ಲದೆ ಇರುವುದರಿಂದ ಸುಗ್ರಿವಾಜ್ಞೆ ಹೊರಡಿಸುತ್ತಿದ್ದೇವೆ. ಫೆಬ್ರವರಿ 28ರ ಒಳಗೆ 60% ಕನ್ನಡ ಫಲಕ ಇರಬೇಕು. ಇದಲ್ಲದೆ ಸಾರ್ವಜನಿಕರಿಗೆ ನೀಡುವ ಮಾಹಿತಿ ಮತ್ತು ಜಾಹಿರಾತುಗಳನ್ನು ಕನ್ನಡದಲ್ಲಿ ಇರಬೇಕು. ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಸರ್ಕಾರ ನಿಗದಿ ಮಾಡಲಿದೆ. ಕನ್ನಡ ಆಡಳಿತ ಭಾಷೆ. ಇದರಲ್ಲಿ ನಾವು ಯಾವುದೇ ರಾಜಿ ಮಾಡುವುದಿಲ್ಲ ಎಂದರು.

ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸಿಮರು: ಸಿಎಂ ಸಿದ್ದರಾಮಯ್ಯ 

ಬಿಜೆಪಿ ಅವಧಿಯಲ್ಲಿ 2022 ರಲ್ಲಿ ಪಾಸ್ ಆಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಸೆಕ್ಷನ್ 17(6) ರಲ್ಲಿ ನಾಮಫಲಕಗಳು ಅರ್ಧದಷ್ಟು ಕನ್ನಡ ಭಾಷೆ ಕೆಳಭಾಗದ ಅರ್ಧ ಬೇರೆ ಭಾಷೆಯಲ್ಲಿ ಇರಬೇಕು ಅಂತ ಎರಡು ಸದನದಲ್ಲಿ ಕಾಯ್ದೆ ಪಾಸ್ ಆಗಿ ರಾಜ್ಯಪಾಲರ ಅಂಕಿತ ಕೂಡಾ ಆಗಿತ್ತು. ಆದರೆ ಅರ್ಧ ಭಾಗ ಮಾತ್ರ ಕನ್ನಡ ಇರಬೇಕು ಎಂಬ ನಿಯಮದ ಬದಲಾಗಿ,ಸಿದ್ದರಾಮಯ್ಯ ಸರ್ಕಾರ 2018 ರಲ್ಲಿ ಹೊರಡಿಸಿದ್ದ ಸುತ್ತೋಲೆ ಅನ್ವಯ 60%ಕನ್ನಡ ನಾಮ ಫಲಕ, 40% ಇತರೇ ಭಾಷೆ ಬಳಕೆ ನಿಯಮವನ್ನೇ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ತಿದ್ದುಪಡಿ ನಿಯಮಕ್ಕೆ ಸುಗ್ರಿವಾಜ್ಞೆ ಹೊರಡಿಸಲು ಸಿಎಂ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪ್ರಧಾನಿಯನ್ನ ನರಹಂತಕ ಅಂದಿದ್ದರು : ಕೋಟ ಶ್ರೀನಿವಾಸ ಪೂಜಾರಿ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಪರಮೇಶ್ವರ್, ಬಿಬಿಎಂಪಿ, ಗೃಹ ಇಲಾಖೆ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES