Monday, December 23, 2024

ಮುಸ್ಲಿಮರಂತೆ ಕ್ರೈಸ್ತರಿಗೂ 4 ಪರ್ಸೆಂಟ್ ಮೀಸಲಿಡಿ : ಐವಾನ್ ಡಿಸೋಜಾ

ಬೀದರ್ : ಕ್ರೈಸ್ತ ಸಮುದಾಯದ ಅಭಿವೃದ್ದಿ ಆಗಬೇಕಾದರೆ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಕನಿಷ್ಠ 2 ಪರ್ಸೆಂಟ್​​​ ಮೀಸಲಾತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವಾನ್‌ ಡಿಸೋಜಾ ಹೇಳಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತ ಸಮುದಾಯ ದೇಶದಲ್ಲಿ ಅಳಿವನಂಚಿನಲ್ಲಿದೆ. ಈ ಹಿನ್ನೆಲೆ ಕ್ರಿಶ್ಚಿಯನ್ ಸಮುದಾಯಕ್ಕೆ ಮುಸ್ಲಿಂ ಸಮುದಾಯಕ್ಕ ನೀಡಿದಂತೆ 4 ಪರ್ಸೆಂಟ್​​​ ಮೀಸಲು ಇಡಬೇಕು ಎಂದು ಅವಲೊತ್ತುಕೊಂಡಿದ್ದಾರೆ.

ಕ್ರೈಸ್ತ ಸಮುದಾಯದ ಜನರು ಉದ್ಯೋಗ ಅರಸಿ ಬೇರೆ ಬೇರೆ ಕಡೆ ಹೋಗಬೇಕಾಗಿದೆ. ರಾಜ್ಯದಲ್ಲಿ‌ ಕ್ರೈಸ್ತ ಸಮುದಾಯದ ಜನರು ಪ್ರಬಲ ಸಮುದಾಯಗಳ ಜೊತೆ ಫೈಟ್​​ ಮಾಡಬೇಕಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿರುವ 5 ಪರ್ಸೆಂಟ್​​ನಲ್ಲಿ ಲಿಂಗಾಯತ ಬಣಸಿಗರ ಜೊತೆ ನಾವು ಫೈಟ್ ಮಾಡಬೇಕಾಗಿದೆ. ಓಬಿಸಿಯಲ್ಲಿ 45 ಸಮುದಾಯಗಳಿವೆ ಎಂದು ಹೇಳಿದ್ದಾರೆ.

ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು

ಜಾತಿ ಗಣತಿ ವರದಿ ಕುರಿತಾಗಿ ಮಾತನಾಡಿ, ಅದೂ ಎಲ್ಲ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿಯನ್ನು ಅಧ್ಯಯನ‌ ಮಾಡಲಾಗಿದೆ. ಈ ವರದಿ ಮೂಲಕ ಎಲ್ಲ ಸಮುದಾಯಗಳ ವಾಸ್ತವ ಅರಿತು ಅನುದಾನ ನೀಡಲು ಅನುಕೂಲ ಆಗುತ್ತದೆ. ಹಾಗಾಗಿ, ಅದನ್ನ ಬಿಡುಗಡೆ ಮಾಡಬೇಕು ಎಂದು ಐವಾನ್‌ ಡಿಸೋಜಾ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES