Wednesday, January 22, 2025

ಗಂಡಂದಿರೇ ಹುಷಾರು..! : ಒಂದ್ ಕಪ್‌ ಟೀ ಕೇಳಿದಕ್ಕೆ ಗಂಡನ ಕಣ್ಣಿಗೆ ಚುಚ್ಚಿದ ಪತ್ನಿ   

ಲಖನೌ: ಒಂದ್‌ ಕಪ್‌ ಟೀ ಕೊಡೇ ಎಂದು ಬಹುತೇಕ ಮಂದಿ ತನ್ನ ಹೆಂಡತಿಯನ್ನು ಕೇಳುವುದು ಸಹಜ ಅಂದ್ರೆ  ಇಲ್ಲೊಬ್ಬ ಮಹಿಳೆ ತನ್ನ ಗಂಡ ಟೀ ಕೇಳಿದಕ್ಕೆ ಕಣ್ಣಿಗೇ ಕತ್ತರಿ ಚುಚ್ಚಿದ್ದಾಳೆ.

ಹೌದು, ಹೆಂಡತಿ ಎಂಬ ಸಲುಗೆಯಿಂದ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಒಂದ್‌ ಕಪ್‌ ಟೀ ಕೊಡೇ ಎಂದು ಕೇಳಿದ್ದಕ್ಕೆ ಹೆಂಡತಿಯು ಕಣ್ಣಿಗೆ ಕತ್ತರಿಯಿಂದ ಚುಚ್ಚಿ ಹಲ್ಲೆ ನಡೆಸಿದ್ದಾಳೆ. ರಕ್ತಸ್ರಾವ ಆಗುತ್ತಿದ್ದರೂ ಮನೆಯಿಂದ ಪರಾರಿಯಾಗಿದ್ದಾಳೆ.

ಘಟನೆ ಹಿನ್ನಲೆ

ಉತ್ತರ ಪ್ರದೇಶದ ಬಾಗ್ಪುರ ಜಿಲ್ಲೆಯ ಅಂಕಿತ್‌ ಎಂಬ ವ್ಯಕ್ತಿಯೇ ಹೆಂಡತಿಯಿಂದ ಹಲ್ಲೆಗೊಳಗಾಗಿದ್ದಾನೆ. ಮೂರು ವರ್ಷದ ಹಿಂದೆ ಇವರು ಯುವತಿಯೊಬ್ಬಳನ್ನು ಮದುವೆಯಾಗಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಜಗಳಗಳು ಸಾಮಾನ್ಯವಾಗಿದ್ದವು. ಇಬ್ಬರ ಮಧ್ಯೆ ವಾಗ್ವಾದಗಳು ನಡೆಯುತ್ತಿದ್ದವು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಮದ್ಯ ಮಾರಾಟ ನಿಷೇಧ : ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ

ಇಷ್ಟಾದರೂ ವ್ಯಕ್ತಿಯು ಅನುಸರಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಆದರೆ, ಆತ ಯಾವಾಗ ಚಹಾ ಕೇಳಿದನೋ, ಕೋಪದಲ್ಲಿದ್ದ ಮಹಿಳೆಯು ಕಣ್ಣಿಗೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂದು ಮನೆಯಿಂದಲೇ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಮನೆ, ಕುಟುಂಬದ ವಿಚಾರಕ್ಕೆ ಅಂಕಿತ್‌ ಹಾಗೂ ಆತನ ಪತ್ನಿ ಮಧ್ಯೆ ಜಗಳಗಳು ನಡೆಯುತ್ತಲೇ ಇದ್ದವು ಎಂದು ಮೂಲಗಳು ತಿಳಿಸಿವೆ. “ನನ್ನ ಪತ್ನಿ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸುತ್ತಿದ್ದಾರೆ, ಕಿರುಕುಳ ನಡೆಸುತ್ತಿದ್ದಾರೆ” ಎಂದು ಕತ್ತರಿಯಿಂದ ಹಲ್ಲೆ ನಡೆಸುವ ಘಟನೆಯ ಮೂರು ದಿನಗಳ ಹಿಂದೆ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಳು ಎನ್ನಲಾಗಿದೆ. ಆದಾಗ್ಯೂ, ಇಬ್ಬರ ಮಧ್ಯೆ ಜಗಳ ನಡೆಯಲು ನಿಖರ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ.

ಪತ್ನಿಯು ಕತ್ತರಿ ಚುಚ್ಚಿದ ಕೂಡಲೇ ಪತಿ ಜೋರಾಗಿ ಕೂಗಿದ್ದಾನೆ. ಕೋಣೆಯಲ್ಲಿದ್ದ ಕುಟಂಬಸ್ಥರು ಕೂಡಲೇ ಹೊರಗೆ ಬಂದು ನೋಡಿದ್ದಾರೆ. ಆತನ ಕಣ್ಣಿನಿಂದ ರಕ್ತ ಸುರಿಯುತ್ತಿದ್ದನ್ನು ಕಂಡು ಕೂಡಲೇ ವೈದ್ಯರು ಹಾಗೂ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಂಕಿತ್‌ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಮೀರತ್‌ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪರಾರಿಯಾಗಿರುವ ಮಹಿಳೆಯ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES