Saturday, May 18, 2024

500 ರೂ.ಗೆ ಗ್ಯಾಸ್‌ ಸಿಲಿಂಡರ್‌: ಸುಳ್ಳು ಸುದ್ದಿ ನಂಬಿ ಕೆವೈಸಿಗೆ ಮುಗಿಬಿದ್ದ ಗ್ರಾಹಕರು!

ಗ್ಯಾಸ್​ ಸಿಲಿಂಡರ್​ ದರ ಅರ್ಧದಷ್ಟು ಕಡಿಮೆಯಾಗುತ್ತಿದೆ ಎಂದು ಗಾಳಿ ಸುದ್ದಿ ನಂಬಿದ ಗ್ರಾಹಕರು ಕೆವೈಸಿಗಾಗಿ  ರಾಜ್ಯದ ಹಲವೆಡೆ ಗ್ಯಾಸ್‌ ಏಜೆನ್ಸಿಯ ಎದುರು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸುತ್ತಿದ್ದಾರೆ. ಗ್ಯಾಸ್‌ ಪಾಸ್ ಪುಸ್ತಕವನ್ನು ಹಿಡಿದುಕೊಂಡು ಬಂದಿದ್ದ ಮಹಿಳೆಯರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ.

500 ರೂ.ಗೆ ಗ್ಯಾಸ್‌ ಸಿಲಿಂಡರ್‌ ನೀಡುವ ಯಾವುದೇ ಯೋಜನೆ ಇಲ್ಲ. ಈ ರೀತಿಯ ಯಾವುದೇ ಸುದ್ದಿ ಹರಡಿದ್ದರೆ ಅದು ಸುಳ್ಳಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೂ, ಕೆವೈಸಿಗಾಗಿ ಗ್ಯಾಸ್​ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಇದನ್ನೂ ಓದಿ: ತಮಿಳು ನಟ ವಿಜಯ್​ಕಾಂತ್​ ನಿಧನ!

ಉಜ್ವಲ ಯೋಜನೆಯ ಗ್ರಾಹಕರಿಗೆ 300 ರೂ., ಹಾಗೂ ಸಾಮಾನ್ಯ ಗ್ರಾಹಕರಿಗೆ 46 ರೂ. ಸಬ್ಸಿಡಿಯನ್ನು ಸರಕಾರ ನೀಡುತ್ತಿದೆ. ಈ ಸಬ್ಸಿಡಿ ಪಡೆಯಲು ಕೆವೈಸಿ ಮಾಡಿಸಬೇಕಿದೆ. ಕೆವೈಸಿ ಮಾಡಿಸಲು 2024 ರ ಮಾರ್ಚ್ 31 ಕಡೆಯ ದಿನವಾಗಿದೆ. ಮತ್ತೆ ದಿನಾಂಕ ವಿಸ್ತಾರ ಆಗುವ ಸಾಧ್ಯತೆಗಳಿವೆ. ಹೀಗಾಗಿ, ಗ್ರಾಹಕರು ನೋಂದಣಿಗಾಗಿ ಒಮ್ಮೆಲೆಗೆ ಮುಗಿಬೀಳುವ ಅವಷ್ಯಕತೆ ಇಲ್ಲ ಎಂದು ಏಜೆನ್ಸಿಗಳ ಮಾಲೀಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES