Sunday, November 24, 2024

Year Ender 2023: ಈ ವರ್ಷ ನಿಧನರಾದ ದಿಗ್ಗಜ ಕ್ರಿಕೆಟಿಗರು ಇವರೇ ನೋಡಿ

ಬೆಂಗಳೂರು: 2023ರ ವರ್ಷ ಮುಕ್ತಾಯದ ಅಂತ್ಯದಲ್ಲಿ ಇದೆ ಈ ವರುಷ ಕ್ರಿಕೆಟ್​ ಕ್ಷೇತ್ರ ಸಾಧನೆ ಮತ್ತು ನೋವಿನ ಎರಡು ಹಾದಿಯನ್ನು ಕಂಡಿದೆ. ಹಾಗಿದ್ರೆ ಈ ಕಳೆದ 12 ತಿಂಗಳ ಅವಧಿಯ ನಿಧನರಾದ ಕ್ರಿಕೆಟ್ ದಿಗ್ಗಜರು ಯಾರೆಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.  

ಹೌದು,ಕ್ರಿಕೆಟ್ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದ ಹಲವು ಆಟಗಾರರಿಗೆ 2023 ವರ್ಷ ವಿದಾಯ ಹೇಳಿದ್ದಾರೆ.

1. ಸಲೀಂ ದುರಾನಿ (ಭಾರತ)

1960ರ ದಶಕದಲ್ಲಿ ಭಾರತದ ಸ್ಟಾರ್​ ಕ್ರಿಕೆಟಿಗರಾಗಿದ್ದರು. ಇವರಿಗೆ 88 ವರ್ಷ ವಯಸ್ಸಾಗಿತ್ತು. ದೀರ್ಘಕಾಲಿನ ಕಾಯಿಲೆಯಿಂದ ಏಪ್ರಿಲ್ 2 2023ರಂದು ಗುಜಾರಾತ್​ನ ಜಾಮ್‌ನಗರದಲ್ಲಿ ನಿಧನರಾಗಿದ್ದರು. ಆಲ್​ರೌಂಡರ್​ ಕ್ರಿಕೆಟಿಗರಾಗಿದ್ದ ದುರಾನಿ ಅವರು ಬಾಲಿವುಡ್​ ಸಿನಿಮಾದಲ್ಲೂ ನಟಿಸಿದ್ದಾರೆ. 1934ರ ಡಿಸೆಂಬರ್​ 11ರಂದು ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಜನಿಸಿದ್ದ ಸಲೀಂ ದುರಾನಿ, ಭಾರತ ತಂಡದಲ್ಲಿ ಬ್ಯಾಟ್​ ಮತ್ತು ಬೌಲಿಂಗ್​ನಿಂದಲೇ ಖ್ಯಾತಿ ಗಳಿಸಿದ್ದರು.

ಎಡಗೈ ಬೌಲರ್ ಆಗಿದ್ದ ಸಲೀಂ, ಟೀಂ ಇಂಡಿಯಾ ಪರವಾಗಿ 29 ಟೆಸ್ಟ್‌ಗಳನ್ನು ಆಡಿದ್ದು, 1961- 62 ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2. ಇಜಾಜ್ ಬಟ್ (ಪಾಕಿಸ್ತಾನ):

ಟೆಸ್ಟ್ ಕ್ರಿಕೆಟಿಗ ಮತ್ತು ಮಾಜಿ PCB ಅಧ್ಯಕ್ಷ ಇಜಾಜ್ ಬಟ್ ಆರೋಗ್ಯ ಸಮಸ್ಯೆಗಳಿಂದಾಗಿ ತನ್ನ ತವರೂರಿನ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ. ಇವರು ಪಾಕಿಸ್ತಾನದ ಪ್ರಬಲ ಆಟಗಾರ ಹಾಗೂ ಆಡಳಿಗಾರ. ಇದವರು ಪಾಕಿಸ್ತಾನಕ್ಕಾಗಿ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಹಲವಾರು ಪ್ರಮುಖ ಆಡಳಿತಾತ್ಮಕ ಸ್ಥಾನಗಳನ್ನು ಅಲಂಕರಿಸಿದ್ದಾರೆ.

1987 ರ ರಿಲಯನ್ಸ್ ವಿಶ್ವಕಪ್ ಸಂಘಟನಾ ಸಮಿತಿಯ ಸದಸ್ಯರಾಗಿ 80 ರ ದಶಕದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯಾಗಿ ನಾಲ್ಕು ವರ್ಷಗಳ ಅವಧಿಯವರೆಗೆ ಹಿರಿಯ ತಂಡವನ್ನು ನಿರ್ವಹಿಸುವವರೆಗೆ ಮತ್ತು ಅಂತಿಮವಾಗಿ 2008 ರಿಂದ 2011 ರವರೆಗೆ PCB ನೇತೃತ್ವದವರೆಗೆ, ಬಟ್ ಎಲ್ಲವನ್ನೂ ತಮ್ಮದೇ ಆದ ನಿಯಮಗಳನ್ನು ಮಾಡಿದ್ದಾರ.

3. ಬಿಷನ್ ಸಿಂಗ್ ಬೇಡಿ (ಭಾರತ)

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಿಷನ್‌ ಸಿಂಗ್‌ ಬೇಡಿ ಅಕ್ಟೋಬರ್‌ 23 2023ರಲ್ಲಿ  ಕೊನೆಯುಸಿರೆಳೆದಿದ್ದಾರೆ. ಟೀಮ್ ಇಂಡಿಯಾ ಪರ 1967ರಿಂದ 1979ರವರೆಗೆ ಒಟ್ಟಾರೆ 67 ಟೆಸ್ಟ್‌ ಪಂದ್ತಗಳನ್ನು ಆಡಿ 266 ವಿಕೆಟ್‌ಗಳನ್ನು ಪಡೆದಿದ್ದ ಚಾಂಪಿಯನ್‌ ಎಡಗೈ ಸ್ಪಿನ್ನರ್‌ ತಮ್ಮ ಬದುಕಿನಾಟ ಅಂತ್ಯಗೊಳಿಸಿದ್ದಾರೆ. ಭಾರತದ ಪರ 10 ಒಡಿಐ ವಿಕೆಟ್‌ಗಳನ್ನೂ ಅವರು ಪಡೆದಿದ್ದಾರೆ.

60-80ರ ದಶಕದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ಎರಾಪಳ್ಳಿ ಪ್ರಸನ್ನ, ಬಿಎಸ್‌ ಚಂದ್ರಶೇಖರ್‌ ಹಾಗೂ ಎಸ್‌ ವೆಂಕಟರಾಘವನ್‌ ಅವರ ಸಮಕಾಲೀನರಾದ ಬಿಷನ್‌ ಸಿಂಗ್‌ ಬೇಡಿ, ಭಾರತ ತಂಡದಲ್ಲಿನ ಸ್ಪಿನ್‌ ಕ್ರಾಂತಿಯ ಹರಿಕಾರರು ಎಂದೇ ಕರೆಯಬಹುದು. ಆ ಕಾಲಕ್ಕೆ ಭಾರತ ತಂಡದ ಸ್ಪಿನ್‌ ಬೌಲಿಂಗ್‌ ವಿಭಾಗ ವಿಶ್ವದ ನಂ.1 ಸ್ಥಾನ ಪಡೆದಿತ್ತು.

4.ಜೋ ಸೊಲೊಮನ್ (ವೆಸ್ಟ್ ಇಂಡೀಸ್)

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೊಲೊಮನ್ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ತಮ್ಮ 7 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್‌ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈ ವೇಳೆ ಅವರು 1 ಶತಕ ಮತ್ತು 9 ಅರ್ಧ ಶತಕ ಸೇರಿದಂತೆ ಒಟ್ಟು 1326 ರನ್ ಕಲೆಹಾಕಿದ್ದರು.

5. ಹೀತ್​ ಸ್ಟ್ರೀಕ್​ (ಝಿಂಬಾಬೈ) 

ಝಿಂಬಾಬೈ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಅವರು ಸೆಪ್ಟೆಂಬರ್ 3, 2023ರಲ್ಲಿ ನಿಧನರಾಗಿದ್ದಾರೆ ಇವರಿಗೆ 49ನೇ ವಯಸ್ಸು ಆಗಿತ್ತು.

ಸ್ವೀಕ್ ಅವರು ಟೆಸ್ಟ್ ಹಾಗು ಏಕದಿನ ಎರಡರಲ್ಲೂ 100 ವಿಕೆಟ್ಗಳನ್ನು ಪಡೆದ ಮೊದಲ ಝಿಂಬಾಬೈ ಕ್ರಿಕೆಟಿಗರಾಗಿದ್ದರು. ಅವರು 100 ಟೆಸ್ಟ್ ವಿಕೆಟ್ ಗಳು ಹಾಗೂ 1,000 ಟೆಸ್ಟ್ ರನ್ ಗಳ ಡಬಲ್ ಸಾಧನೆ ಮಾಡಿರುವ ದೇಶದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 2000 ರನ್ ಹಾಗೂ 200 ವಿಕೆಟ್ ಗಳನ್ನು ಗಳಿಸಿದ ದೇಶದ ಏಕೈಕ ಆಟಗಾರರಾಗಿದ್ದಾರೆ.

6. ಸುಧೀರ್ ನಾಯಕ್ (ಭಾರತ)

ಟೀಮ್​ ಇಂಡಿಯಾದ ಮಾಜಿ ಆಟಗಾರ, ರಣಜಿ ಟ್ರೋಫಿ ವಿಜೇತ ಮುಂಬಯಿ ತಂಡದ ನಾಯಕ ಸುಧೀರ್‌ ನಾಯ್ಕ್ ಮುಂಬಯಿಯ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ.

1970-71ರ ರಣಜಿ ಟ್ರೋಫಿಯಲ್ಲಿ ತಂಡ ನಾಯಕರಾಗಿದ್ದ ಅವರು ಸುನೀಲ್​ ಗವಾಸ್ಕರ್, ಅಜಿತ್ ವಾಡೇಕರ್, ದಿಲೀಪ್ ಸರ್ದೇಸಾಯಿ ಮತ್ತು ಅಶೋಕ್ ಮಂಕಡ್ ಅವರಂತಹ ದಿಗ್ಗಜ ಆಟಗಾರ ಅನುಪಸ್ಥಿಯಲ್ಲಿಯೂ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ತಂಡವನ್ನು ಚಾಂಪಿಯನ್​ ಪಟ್ಟ ಅಲಂಕರಿಸಿದ ಕೀರ್ತಿ ಇವರದ್ದಾಗಿದೆ.

ಸುಧೀರ್‌ ನಾಯ್ಕ್ ಅವರು ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ ಟೀಮ್​ ಇಂಡಿಯಾ ಪರ ಮೂರು ಟೆಸ್ಟ್ , 2 ಏಕದಿನ ಹಾಗೂ 85 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 141, ಏಕದಿನದಲ್ಲಿ 38 ರನ್​ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 4376 ರನ್ ಬಾರಿಸಿದ್ದಾರೆ. ಜತೆಗೆ ಏಳು ಶತಕಗಳನ್ನು ಗಳಿಸಿದ್ದಾರೆ. ಒಂದು ದ್ವಿಶತಕವನ್ನೂ ದಾಖಲಿಸಿದ್ದಾರೆ. ಅವರು ಆರಂಭಿಕನಾಗಿ ಬ್ಯಾಟಿಂಗ್​ ನಡೆಸುತ್ತಿದ್ದರು. ಮುಂಬೈ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮತ್ತು ವಾಂಖೆಡೆ ಸ್ಟೇಡಿಯಂನ ಕ್ಯುರೇಟರ್ ಆಗಿ ಕೆಲಸ ಮಾಡಿದ್ದಾರೆ.

ಈ ಎಲ್ಲಾ ದಿಗ್ಗಜ ಕ್ರಿಕೆಟಿಗರ ನಿಧನದಿಂದ ಕ್ರಿಕೆಟ್ ಕ್ಷೇತ್ರವು ದೊಡ್ಡ ನಷ್ಟ ಮತ್ತು ತುಂಬಲಾರದ ನೋವುಂಟಾಗಿದೆ

 

 

 

RELATED ARTICLES

Related Articles

TRENDING ARTICLES