Saturday, January 11, 2025

IND vs SA: ಕನ್ನಡಿಗ ಕೆ.ಎಲ್​ ರಾಹುಲ್ ಅಮೋಘ ಶತಕ; 245 ರನ್​ ಗಳಿಸಿದ ಭಾರತ

ಜೊಹಾನ್ಸ್​ಬರ್ಗ್​: ಕನ್ನಡಿಗ ಕೆ.ಎಲ್​ ರಾಹುಲ್ ಅಮೋಘ ಶತಕವನ್ನು ಸಿಡಿಸಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. 

ಈ ಬ್ಯಾಟಿಂಗ್​ ಸಾಹಸದಿಂದ ಟೀಮ್​ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 245 ರನ್​ ಬಾರಿಸಿದೆ.

8 ವಿಕೆಟ್​ ಕಳೆದುಕೊಂಡು 208 ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತ 245 ರನ್​ ಗಳಿಸಿ ಆಲೌಟ್​ ಆಯಿತು. 70 ರನ್​ ಗಳಿಸಿದ್ದ ರಾಹುಲ್(KL Rahul)​ ದ್ವಿತೀಯ ದಿನದಾಟದಲ್ಲಿ 31 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು. ಸಿರಾಜ್​ 5 ರನ್​ ಗಳಿಸಿದರೂ ರಾಹುಲ್​ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸ್ಟ್ಯಾಂಡ್​ ನೀಡಿದರು. ಅವರು 22 ಎಸೆತಗಳನ್ನು ಎದುರಿಸಿ ನಿಂತರು.

ಇದನ್ನೂ ಓದಿ: ರಾಜ್ಯದಲ್ಲಿ ‘ಸ್ಪೋರ್ಟ್ಸ್‌ ಸಿಟಿ’ ನಿರ್ಮಾಣಕ್ಕೆ ಒತ್ತು: ಗೃಹ ಸಚಿವ ಡಾ.‌ ಜಿ ಪರಮೇಶ್ವರ್

ದ್ವಿತೀಯ ದಿನದಾಟದಲ್ಲಿ ಬಿರುಸಿನ ಆಟಕ್ಕೆ ಒತ್ತು ಕೊಟ್ಟ ರಾಹುಲ್​ ಶತತ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರು. ದ್ವಿತೀಯ ದಿನದಾಟದಲ್ಲಿ 2 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿದರು. ಅದರಲ್ಲೂ ಸಿಕ್ಸರ್​ ಮೂಲಕವೇ ಶತಕ ಪೂರ್ತಿಗೊಳಿಸಿದರು. ಇದು ಅವರ 8ನೇ ಟೆಸ್ಟ್​ ಶತಕವಾಗಿದೆ. ಅಲ್ಲದೆ ಸೆಂಚುರಿಯನ್​ನಲ್ಲಿ 2ನೇ ಶತಕ. 2021ರಲ್ಲಿಯೂ ರಾಹುಲ್​ ಇಲ್ಲಿ ಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ಆರಂಭಿಕನಾಗಿ ಅವರು ಈ ಸಾಧನೆ ಮಾಡಿದ್ದರು. 123 ರನ್​ ಬಾರಿಸಿದ್ದರು.

ದಾಖಲೆ ಬರೆದ ರಾಹುಲ್​

ಸೆಂಚುರಿಯನ್​ನಲ್ಲಿ ಪ್ರವಾಸಿ ತಂಡದ ಆಟಗಾರನೊಬ್ಬ ಸತತವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ರಾಹುಲ್​ ಪಾತ್ರವಾಗಿದ್ದಾರೆ. ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಒಟ್ಟು 14 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್​ ನೆರವಿನಿಂದ 101 ರನ್​ ಗಳಿಸಿ ಬರ್ಗರ್​ಗೆ ವಿಕೆಟ್​ ಒಪ್ಪಿಸಿದರು. ಅವರು ನಿಂತು ಆಡದೇ ಹೋಗಿದ್ದರೆ ಭಾರತ 150 ರನ್​ಗಳಿಸುವುದು ಕೂಡ ಕಷ್ಟವಾಗುತ್ತಿತ್ತು. ತಂಡದ ಬಹುಪಾಲು ಮೊತ್ತ ರಾಹುಲ್​ ಅವರದ್ದೇ ಆಗಿತ್ತು.

ಜೊಹಾನ್ಸ್​ಬರ್ಗ್​ನ ಸೆಂಚುರಿಯನ್​ನಲ್ಲಿ ಮಂಗಳವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಆಘಾತ ಎದುರಿಸಿತ್ತು. ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಇದೇ ಮೊದಲ ಬಾರಿ ಆಡಲಿಳಿದ ನಾಯಕ ರೋಹಿತ್​ ಶರ್ಮ(5) ಕೇವಲ ಒಂದು ಬೌಂಡರಿಗೆ ಸೀಮಿತರಾಗಿ ವಿಕೆಟ್​ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ದ್ವಿತೀಯ ವಿಕೆಟ್​ಗೆ ಕ್ರೀಸ್​ಗೆ ಬಂದ ಶುಭಮನ್​ ಗಿಲ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. 12 ಎಸೆತ ಎದುರಿಸಿ ಕೇವಲ 2 ರನ್​ಗಳಿಸಿ ಔಟಾದರು.

ಬಡಬಡನೆ 4 ಬೌಂಡರಿ ಬಾರಿಸಿದ ಯುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಕೂಡ 17 ರನ್​ಗೆ ಆಟ ಮುಗಿಸಿದರು. ತಂಡದ ಮೊತ್ತ 24 ಆಗುವಷ್ಟರಲ್ಲಿ ಮೂರು ವಿಕೆಟ್​ ಕಳೆದುಕೊಂಡ ಭಾರತ ಆರಂಭಿಕ ಆಘಾತಕ್ಕೆ ಒಳಗಾಯಿತು. ಈ ವೇಳೆ ನಾಲ್ಕನೇ ವಿಕೆಟ್​ಗೆ ಜತೆಯಾದ ಶ್ರೇಯಸ್​ ಅಯ್ಯರ್​ ಮತ್ತು ವಿರಾಟ್​ ಕೊಹ್ಲಿ ಕೆಲ ಕಾಲ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದರು.

ಇದನ್ನೂ ಓದಿ: ಭಜರಂಗ್ ಪುನಿಯಾ ಜೊತೆ ಕುಸ್ತಿ ಅಖಾಡಕ್ಕಿಳಿದ ರಾಹುಲ್ ಗಾಂಧಿ!

ಉತ್ತಮ ಬ್ಯಾಟಿಂಗ್​ ನಡೆಸುವ ಮೂಲಕ ಭೋಜನ ವಿರಾಮದ ತನಕ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಈ ವಿರಾಮದ ಬಳಿಕ ವಿಕೆಟ್​ ಕೈಚೆಲ್ಲಿದರು. ಉಭಯ ಆಟಗಾರರ ಜತೆಯಾಟಕ್ಕೆ ರಬಾಡ ಬ್ರೇಕ್​ ಹಾಕಿದರು. 31 ರನ್​ ಗಳಿಸಿದ್ದ ಅಯ್ಯರ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದರು. ಕೊಹ್ಲಿ ಮತ್ತು ಅಯ್ಯರ್​ 4ನೇ ವಿಕೆಟ್​ಗೆ 68 ರನ್​ ಜತೆಯಾಟ ನಡೆಸಿದರು. ಅಯ್ಯರ್​ ಅವರ ವಿಕೆಟ್​ ಬಿದ್ದು 15 ರನ್​ ಅಂತರದಲ್ಲಿ ವಿರಾಟ್​ ಕೊಹ್ಲಿಯ ವಿಕೆಟ್​ ಕೂಡ ಬಿದ್ದಿತು. ಕೊಂಚ ಚೇತರಿಕೆ ಕಂಡಿದ್ದ ಭಾರತ ಮತ್ತೆ ಆಘಾತಕ್ಕೊಳಗಾಯಿತು. ವಿರಾಟ್​ ಕೊಹ್ಲಿ 64 ಎಸೆತ ಎದುರಿಸಿ 5 ಬೌಂಡರಿ ನರೆವಿನಿಂದ 38 ರನ್​ ಗಳಿಸಿದರು.

 

RELATED ARTICLES

Related Articles

TRENDING ARTICLES