Wednesday, January 22, 2025

ಜನವರಿ1ಕ್ಕೆ ISRO ಮತ್ತೊಂದು ಮೈಲಿಗಲ್ಲು!

ಬೆಂಗಳೂರು: ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹ ಇಳಿಸಿ ಅಧ್ಯಯನ ನಡೆಸಿದ ಇಸ್ರೋ, ಸೂರ್ಯನ ಅಧ್ಯಯನಕ್ಕೂ ಆದಿತ್ಯ -ಎಲ್‌1 ನೌಕೆ ಕಳುಹಿಸಲಾಗಿದೆ. 2023ರ ಸಾಲಿನಲ್ಲಿ ಹತ್ತು ಹಲವು ಸಾಧನೆಗೈದ ಇಸ್ರೋ ಇದೀಗ 2024ರ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಲು ಸಜ್ಜಾಗಿದೆ.

ಜನವರಿ 1 ರಂದು ದೇಶದ ಮೊದಲ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹವನ್ನು ಪೋಲಾರ್ ನೌಕೆಯನ್ನು ಇಸ್ರೋ ಉಡಾವಣೆ ಮಾಡುತ್ತಿದೆ. ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರ, ಎಕ್ಸ್ ರೇ ಬೈನರಿ, ಸಕ್ರಿಯ ಗ್ಯಾಲಕ್ಸಿ ನ್ಯೂಕ್ಲಿಯಸ್, XPoSat ಪಲ್ಸರ್‌ಗಳು ಸೇರಿದಂತೆ 50 ಪ್ರಕಾಶಮಾನ ಮೂಲಗಳ ಅಧ್ಯಯನ ಮಾಡಲು ಈ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯ ಕುರಿತು ಅಕ್ಷೇಪಾರ್ಹ ಹೇಳಿಕೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ FIR

ವಿಶೇಷ ಅಂದರೆ ಈ ಉಪಗ್ರಹವನ್ನು 500 ರಿಂದ 700 ಕಿಲೋಮೀಟರ್ ವೃತ್ತಕಾರಾದ ಭೂಮಿಯ ಕಕ್ಷೆಯಲ್ಲಿ ಇರಿಸಿ ಅಧ್ಯಯನ ಮಾಡಲಾಗುತ್ತದೆ. ಕನಿಷ್ಠ ಐದು ವರ್ಷಗಳ ಕಾಲ ಈ ಅಧ್ಯಯನ ನಡೆಯಲಿದೆ. ನಾಸಾ ಬಳಿಕ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ ಕಳುಹಿಸುತ್ತಿರುವ ಎರಡನೇ ಸಂಸ್ಥೆ ಇಸ್ರೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2021ರಲ್ಲಿ ನಾಸಾ ಪೊಲರಿಮೀಟರ್ ಎಕ್ಸ್ ರೇ ಎಕ್ಸ್‌ಪ್ಲೋರರ್ ಉಪಗ್ರಹ ಕಳುಹಿಸಿತ್ತು.

RELATED ARTICLES

Related Articles

TRENDING ARTICLES