Wednesday, January 22, 2025

ಕೊರೋನಾಗೆ ಮತ್ತಿಬ್ಬರ ಸಾವು : 450ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತಷ್ಟು ಉಲ್ಭಣಗೊಂಡಿದೆ. ಇಂದು ರಾಜ್ಯದಲ್ಲಿ ಮತ್ತಿಬ್ಬರು ಕೊವಿಡ್​ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇಂದು ಒಂದೇ ದಿನ 74 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸದ್ಯ 464 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನ ಪಾಸಿಟಿವಿಟಿ ದರ ಶೇ.1.15ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 6403 ಟೆಸ್ಟ್‌(680 RTCPR ಹಾಗೂ 1723 RAT) ಟೆಸ್ಟ್​ ಮಾಡಲಾಗಿದೆ.

ಮೈಸೂರು ಹಾಗೂ ದಕ್ಷಿಣ ಕನ್ನಡದಲ್ಲಿ ಒಬ್ಬರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲೇ ಅತಿ ಹೆಚ್ಚು (57) ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಈವರೆಗೆ 376 ಕೇಸ್ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? : ನ್ಯೂ ಇಯರ್​ಗೆ ಕೋವಿಡ್‌ ಮಾರ್ಗಸೂಚಿ ಇಲ್ಲ,ಬಿಗಿ ಭದ್ರತೆ ಮಾತ್ರ: ಪೊಲೀಸ್ ಆಯುಕ್ತ ಬಿ ದಯಾನಂದ

ಒಟ್ಟು 464 ಸಕ್ರಿಯ ಪ್ರಕರಣಗಳಲ್ಲಿ 423 ಕೇಸ್‌ಗಳು ಹೋಮ್ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. 41 ಕೇಸ್‌ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ ಐಸಿಯು ನಲ್ಲಿ 16 ಕೇಸ್‌‌ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

Related Articles

TRENDING ARTICLES