ಹಾವೇರಿ: ವಸತಿ ಶಾಲೆ ಅವ್ಯವಸ್ಥೆ ಕುರಿತು ಪವರ್ ಟಿವಿ ಸುಧೀರ್ಘವಾಗಿ ಸುದ್ದಿ ಬಿತ್ತರಿಸಿತ್ತು.ವರದಿ ನೋಡಿ ಅಲರ್ಟ್ ಆದ ಅಧಿಕಾರಿಗಳು ವಸತಿ ಶಾಲೆ ಮೂಲಭೂತ ಸೌಲಭ್ಯ ಒದಗಿಸಿದ್ದಾರೆ.
ಹಾವೇರಿಯ ಅಕ್ಕೂರಿನಲ್ಲಿರೋ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮೂಲ ಸೌಕರ್ಯವಿಲ್ಲದೇ ಚಾಪೆ ಮೇಲೆ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಇತ್ತು ಈ ಕುರಿತು ಡಿಸೆಂಬರ್ 22ರಂದು ಪವರ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು.
ಇದನ್ನೂ ಓದಿ: ಪವರ್ ಟಿವಿ ಇಂಪ್ಯಾಕ್ಟ್ : ಕುರುಗೋಡು ವಸತಿ ಶಾಲೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ…
20 ಕೋಟಿಯಲ್ಲಿ ನಿರ್ಮಾಣವಾದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳೇ ಇರಲಿಲ್ಲ.ಸುದ್ದಿ ಪ್ರಸಾರವಾದಂತೆ ಡೆಸ್ಕ್, ಕಾಟ್, ಬೆಡ್, ಡೈನಿಂಗ್ ಟೇಬಲ್ಗಳನ್ನು 20 ಕೋಟಿ ವೆಚ್ಚ ಮಾಡಿ ವಿದ್ಯಾರ್ಥಿಗಳಿಗೆ ನೀಡಿದ್ಧಾರೆ. ವಿದ್ಯಾರ್ಥಿಗಳ ಪವರ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.