Sunday, December 22, 2024

ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ರಾಷ್ಟ್ರಪತಿ ಸಹ ಆಗ್ತಾರೆ! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ದ್ವಾರಕನಾಥ್  

ಬೆಂಗಳೂರು: ನರೇಂದ್ರ ಮೋದಿ 2024ಕ್ಕೆ ಮತ್ತೆ ಪ್ರಧಾನಿಯಾಗುತ್ತಾರೆ ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಖ್ಯಾತ ಜ್ಯೋತಿಷಿ ‘ರಾಜಗುರು’ ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.

ಪ್ರಧಾನಿ ಮಂತ್ರಿ ಮೋದಿಯಲ್ಲಿ ಯಾರೂ ತಪ್ಪು ಕಂಡುಹಿಡಿಯಲು ಆಗಿಲ್ಲ. ಅವರಿಗೆ ವಿರೋಧ ಪಕ್ಷವೇ ಇಲ್ಲ, ಇದು ನಮ್ಮ ಪ್ರಯತ್ನ ಅಲ್ಲ. ಅದೊಂದು ದೈವ ಶಕ್ತಿ ಎಂದು ಆಧ್ಯಾತ್ಮಿಕ ಗುರು ದ್ವಾರಕಾನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡಕ್ಕೆ ಮತ್ತೆ ಮೆಗಾಸ್ಟಾರ್ : ದರ್ಶನ್ ಮುಂದಿನ ಚಿತ್ರದಲ್ಲಿ ಚಿರಂಜೀವಿ?

ಅವರಿಗೆ ಪುಣ್ಯ ಇದ್ಯೋ ಗೊತ್ತಿಲ್ಲ. ಅವರಿಗೆ ವಿರೋಧ ಅಲೆಯೇ ಇಲ್ಲ. ಪರಮಾತ್ಮನ ಇಚ್ಚೆ ಇದ್ರೆ ಅವರೇ ರಾಷ್ಟ್ರಪತಿ ಆಗಬಹುದು ಎಂದು ರಾಜಗುರು, ಆಧ್ಯಾತ್ಮಿಕ ಗುರು ದ್ವಾರಕನಾಥ್ ಅವರು ಭವಿಷ್ಯ ನುಡಿದಿದ್ದಾರೆ.

ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದಲ್ಲಿ ಸಂದೇಹ ಬೇಡ. ಸನಾತನ ಧರ್ಮ ಉಳಿಯಬೇಕು ಅಷ್ಟೇ. ವಿರೋಧ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ. 2028 ಕ್ಕೆ ವಿರೋಧ ಪಕ್ಷ ಬಲವಾಗುತ್ತದೆ.ನಮ್ಮ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.

 

 

RELATED ARTICLES

Related Articles

TRENDING ARTICLES