Wednesday, January 22, 2025

ಅದ್ದೂರಿಯಾಗಿ ನಡೆದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ರಥೋತ್ಸವ

ಶಿವಮೊಗ್ಗ : ನಗರದಲ್ಲಿ ಇಂದು ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಮಾಸಗಳಲ್ಲೇ ಶ್ರೇಷ್ಟ ಮಾಸ ಎಂದೇ ಕರೆಯಲ್ಪಡುವ ಮಾರ್ಗಶಿರ ಶುದ್ದ ಹುಣ್ಣಿಮೆಯಾದ ಇಂದು ಚಂಡಿಕಾ ದುರ್ಗಾ ಪರಮೇಶ್ವರಿಯ ಆರಾಧನೆ ನಡೆಸಲಾಗುತ್ತದೆ. ಈ ಅಂಗವಾಗಿ ಕೋಟೆ ಶ್ರೀ ದುರ್ಗಾಪರಮೇಶ್ವರಿ ರಥೋತ್ಸವ ನಡೆಸಲಾಯಿತು.

ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಈ ದುರ್ಗಾಪರಮೇಶ್ವರಿ ದೇವಲಾಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ರಥೋತ್ಸವವನ್ನು ನೆರವೇರಿಸಲಾಯಿತು. ಶಿವಮೊಗ್ಗದ ಗ್ರಾಮದೇವತೆ ಎಂದೇ ಕರೆಯಲ್ಪಡುವ ಈ ದೇವಾಲಯದಲ್ಲಿ, ಇಂದು ರಥೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಈ ಸುದ್ದಿ ಓದಿದ್ದೀರಾ? : ನಾಳೆ ನಂಜನಗೂಡು ‘ಗೌತಮ ಪಂಚ ಮಹಾರಥೋತ್ಸವ’ : ರಥದ ತೂಕ ಎಷ್ಟು ಟನ್ ಗೊತ್ತಾ?

ಗ್ರಾಮದಲ್ಲಿ ರಾಕ್ಷಸರ ಉಪಟಳವನ್ನು ಕಡಿಮೆಗೊಳಿಸಲು ಇಂದಿನ ದಿನ ದೂರ್ವಾಸ ಮುನಿಗಳು ಚಂಡಿಕಾ ದುರ್ಗಾ ಪೂಜೆ ನೆರವೇರಿಸಿದ್ದರು. ಈ ದಿನವಾಗಿದ್ದರುವ ಹಿನ್ನೆಲೆಯಲ್ಲಿ ಇಂದು ಈ ರಥೋತ್ಸವ ನಡೆಸಲಾಗುತ್ತದೆ ಎಂಬುದು ಇತಿಹಾಸ ಹೇಳುತ್ತದೆ. ಅದರಂತೆ, ಈ ರಥೋತ್ಸವ ನಡೆದಿದ್ದು, ಉತ್ಸವದಲ್ಲಿ ಎಲ್ಲೆಡೆಯಿಂದ ಭಕ್ತರು ಬಂದು ಭಾಗವಹಿಸಿ, ಶ್ರೀ ದೇವರ ಆಶಿರ್ವಾದ ಪಡೆದರು. ರಥೋತ್ಸವದ ಅಂಗವಾಗಿ ದೇವಾಲಯ ಆವರಣದಲ್ಲಿ ಜಾತ್ರೆಯ ಕಳೆ ಕಟ್ಟಿತ್ತು.

RELATED ARTICLES

Related Articles

TRENDING ARTICLES