Sunday, December 22, 2024

ಈ ಬಿಕಾರಿ ಸರ್ಕಾರ ನೀರಿನ ಮೇಲೂ ತೆರಿಗೆ ಹಾಕುತ್ತಿದೆ : ಡಾ.ಕೆ. ಸುಧಾಕರ್ ಕಿಡಿ

ಬೆಂಗಳೂರು : ಈ ಬಿಕಾರಿ ಕಾಂಗ್ರೆಸ್ ಸರ್ಕಾರ ಕುಡಿಯುವ ನೀರಿನ ಮೇಲೂ ತೆರಿಗೆ ಹಾಕಿ ಸುಲಿಗೆ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್ ಕಿಡಿಕಾರಿದ್ದಾರೆ.

ನೀರಿನ ಮೇಲಿನ ತೆರಿಗೆ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ವಾಗ್ದಾಳಿ ನಡೆಸಿದ್ದಾರೆ.

ಹಾಲಿನ ದರ ಏರಿಕೆ ಮಾಡಿದ್ದಾಯ್ತು. ಕರೆಂಟ್ ಬಿಲ್ಲು ಗಗನಕ್ಕೇರಿಸಿದ್ದಾಯ್ತ. ಆಸ್ತಿ ನೋಂದಣಿ ದರ ಹೆಚ್ಚಾಯ್ತು. ಮುದ್ರಾಂಕ ದರವೂ ದುಬಾರಿ ಆಯ್ತು. ಕಡೆಗೆ ಜನನ-ಮರಣ ಪ್ರಮಾಣ ಪತ್ರದ ಶುಲ್ಕವನ್ನೂ ಏರಿಸಿದ್ದಾಯ್ತು ಎಂದು ಕುಟುಕಿದ್ದಾರೆ.

ಕನ್ನಡಿಗರು ಇನ್ನೆಷ್ಟು ಅಡ್ಜೆಸ್ಟ್ ಮಾಡ್ಕೋಬೇಕೋ?

ಇಷ್ಟು ಸಾಲದು ಅಂತ ಈಗ ಕುಡಿಯುವ ನೀರಿನ ಮೇಲೂ ತೆರಿಗೆ ಹಾಕಿ ಸುಲಿಗೆ ಮಾಡಲು ಹೊರಟಿದೆ ಈ ಬಿಕಾರಿ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ ಕರ್ಮಕ್ಕೆ ಕನ್ನಡಿಗರು ಇನ್ನೆಷ್ಟು ಅಡ್ಜೆಸ್ಟ್ ಮಾಡ್ಕೋಬೇಕೋ ಏನೋ ಗೊತ್ತಾಗುತ್ತಿಲ್ಲ ಎಂದು ಡಾ.ಕೆ. ಸುಧಾಕರ್ ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES