Thursday, April 3, 2025

‘ಕಾಟೇರ’ ದಾಖಲೆ : 50 ಸಾವಿರ ಟಿಕೆಟ್ ಸೋಲ್ಡ್, ರಿಲೀಸ್​ಗೂ ಮೊದಲೇ ಕೋಟಿ ಕಲೆಕ್ಷನ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ಕಾಟೇರ’ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ನಿರ್ಮಿಸಿದೆ.

ಕೆೇವಲ 72 ಗಂಟೆಗಳಲ್ಲಿ ಎಲ್ಲಾ ಚಿತ್ರ ಮಂದಿರಗಳಲ್ಲಿ ‘ಕಾಟೇರ’ ಚಿತ್ರದ 50,000 ಟಿಕೆಟ್​ಗಳು ಸೋಲ್ಡ್ ಔಟ್ ಆಗಿದ್ದು, ಬಾಕ್ಸ್ ಆಫೀಸ್ ಸುಲ್ತಾನ್ ಅಬ್ಬರಕ್ಕೆ ಹಿಸ್ಟರಿ ಕ್ರಿಯೇಟ್ ಆಗಿದೆ.

ಇದೇ ಡಿಸೆಂಬರ್ 29ರಂದು ರಾಜ್ಯಾದ್ಯಂತ ‘ಕಾಟೇರ’ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ದಾಸನ ಭಕ್ತಗಣ ಬುಕ್ ಮೈ ಶೋನಲ್ಲಿ ಮುಂಗಡ ಟಿಕೆಟ್ ಅನ್ನು ಖರೀದಿಸಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿ 48 ಗಂಟೆಗಳಲ್ಲಿ ಒಂದು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ.

ಈ ಸುದ್ದಿ ಓದಿದ್ದೀರಾ? : ಕನ್ನಡಕ್ಕೆ ಮತ್ತೆ ಮೆಗಾಸ್ಟಾರ್ : ದರ್ಶನ್ ಮುಂದಿನ ಚಿತ್ರದಲ್ಲಿ ಚಿರಂಜೀವಿ?

ತರುಣ್ ಸುಧಿರ್ ನಿರ್ದೇಶನ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ‘ಕಾಟೇರ’ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ನಟ ದರ್ಶನ್​ ಅವರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರಿ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್, ಟ್ರೈಲರ್ ಹಾಗೂ ಮೂರು ಹಾಡುಗಳು ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿವೆ.

RELATED ARTICLES

Related Articles

TRENDING ARTICLES