Thursday, December 19, 2024

ಯಡಿಯೂರಪ್ಪಗಾಗಿ ನಾವು ಕೆಲಸ ಮಾಡಲ್ಲ : ಶಾಸಕ ಯತ್ನಾಳ್

ವಿಜಯಪುರ : ಪ್ರಧಾನಿ ಮೋದಿಯವರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ, ಇಂಥ ಯಡಿಯೂರಪ್ಪಗಾಗಿ ನಾವು ಕೆಲಸ ಮಾಡಲ್ಲ ಎಂದು ಮತ್ತೆ ಬಿಎಸ್​ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ನನಗೆ ನೊಟೀಸ್ ಕೊಡಲಿ, ಪಕ್ಷದಿಂದ ಹೊರ ಹಾಕಲು ನೋಡಲಿ. ಇವರೆಲ್ಲರ ಬಣ್ಣ ತೆಗೆಯುತ್ತೇನೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

ಸತ್ಯ ಹೇಳಿದರೆ ಎಲ್ಲರಿಗೂ ಭಯ. ಹಾಗಾಗಿ ಭಯದಲ್ಲಿ ಇಡಬೇಕು. ಎಲ್ಲರೂ ಕಳ್ಳರಾದರೆ, ರಾಜ್ಯ ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ. ಕಲ್ಲಿದ್ದಲು ಹಗರಣ, 2ಜಿ ಹಗರಣ ಆಗಿವೆ ಎಂದು ಹೇಳಿದರು.

ಈ ಸುದ್ಧಿ ಓದಿದ್ದೀರಾ? : ಮೋದಿಯವರೇನು ಆರ್ಥಿಕ ತಜ್ಞರಾ? : ಸಿದ್ದರಾಮಯ್ಯ 

ಮೋದಿ ಕಾಲದಲ್ಲಿ ಹಗರಣ ನೋಡಿದ್ದೀರಾ?

ಪ್ರಧಾನಿ ಮೋದಿ ಅವರ ಕಾಲದಲ್ಲಿ ಒಂದಾದರೂ ಹಗರಣ ನೋಡಿದ್ದೀರಾ? ಮೋದಿ ಅವರ ಬಗ್ಗೆ ಕೇವಲ ಟೀಕೆ ಮಾಡುತ್ತಾರೆ. ಆದರೆ, ಪ್ರಧಾನಿ ಮೋದಿಯವರು ಭ್ರಷ್ಟಾಚಾರದಲ್ಲಿ ಇದ್ದಾರೆ ಎಂದು ಹೇಳುವ ತಾಕತ್ತು ದೇಶದಲ್ಲಿ ಯಾರಿಗಾದರೂ ಇದೆಯಾ? ಎಂದು ಶಾಸಕ ಯತ್ನಾಳ್ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES