Sunday, December 22, 2024

ಸಿದ್ದರಾಮಯ್ಯ ಮುಗ್ದ ಅಲ್ಲ, ಧೂರ್ತ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಮುಗ್ದ ಅಲ್ಲ, ಸಿದ್ದರಾಮಯ್ಯ ಧೂರ್ತರಿದ್ದಾರೆ. ಇದು‌ ನನ್ನ ಗಂಭೀರ ಆರೋಪ ಎನ್ನುವ ಮೂಲಕ ಸಿದ್ದರಾಮಯ್ಯರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧೂರ್ತರಿಗೆ ಹೋಲಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಸ್ತ್ರ ಸಂಹಿತೆ ಬಿಟ್ಟು ಹಿಜಾಬ್ ಧರಿಸುತ್ತೇವೆ ಎಂದರೆ, ನಾಳೆ ಒಬ್ಬರು ಕೇಸರಿ ಶಾಲು ಹಾಕಿಕೊಂಡು ಬರ್ತೀನಿ ಅಂತಾರೆ. ಸಿದ್ದರಾಮಯ್ಯನವರೇ, ಏನು ಮಾಡೋಕೆ ಹೊರಟಿದ್ದೀರಿ? ಎಂದು ಛೇಡಿಸಿದರು.

ಮಾಧ್ಯಮದವರು ಇದನ್ನು ಸರಿಯಾಗಿ ಅನಾಲಿಸಿಸ್ ಮಾಡಬೇಕು. ಸಿದ್ದರಾಮಯ್ಯನವರೇ, ನಿಮ್ದು ಮುಟ್ಟಾಳತನವೋ? ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ತರ ಹೇಳಿಕೆ ಕೊಡುತ್ತಿದ್ದಿರೋ? ಸಮಾಜ ಒಡೆದು ವೋಟ್ ತಗೆದುಕೊಳ್ಳಬೇಕು ಅನ್ನೋದಾ?ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಹುಚ್ಚ ಹುಚ್ವರಾಗಿ ಮಾತಾಡ್ತಾರೆ

ಒಂದು ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಮಾತ್ರ ನೀವು ಅಧಿಕಾರದಲ್ಲಿ ಇರೋದು. ಇದು ನಿಮ್ಮ ಸ್ಥಿತಿ. ಹೀಗೆ ನೀವು ಹುಚ್ಚ ಹುಚ್ವರಾಗಿ ಮಾತನಾಡಿದ್ರೆ, ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸುತ್ತಾರೆ ನೆನಪಿಟ್ಟುಕೊಳ್ಳಿ ಸಿದ್ದರಾಮಯ್ಯ ಎಂದು ಕಿಡಿಕಾರಿದರು.

ನಾವೇನಾದರೂ ಹಿಜಾಬ್ ವಿಷಯ ಎತ್ತಿದ್ವಾ?

ನಿಮ್ಮ ವೈಫಲ್ಯ ಮುಚ್ಚಲು ಈ ರೀತಿ ವಿವಾದ ಹುಟ್ಟು ಹಾಕೋದು ನಿಮ್ಮ ಕೆಲಸವಾ? ನಾವೇನಾದರೂ ಹಿಜಾಬ್ ವಿಷಯ ಎತ್ತಿದ್ವಾ? ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಇಲ್ಲ. ಸಿದ್ದರಾಮಯ್ಯನವರೇ, ನಿಮಗ್ಯಾಕೆ ಈ ಕೆಟ್ಟ ವಿಚಾರ. ಸಿದ್ದರಾಮಯ್ಯಗೆ ಇದು ಗೊತ್ತಿಲ್ಲ ಅಂತ ಅಲ್ಲ. ನೀವು ಮುಗ್ದ ಅಲ್ಲ, ಧೂರ್ತ ಎಂದು ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES