ಬೆಂಗಳೂರು : ರಾಜ್ಯದಲ್ಲಿ 8 ಜನರಿಗೆ ಕೊರೋನಾ ರೂಪಾಂತರಿ JN.1 ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲೂ JN.1 ಹೊಸ ವೈರಸ್ ಪತ್ತೆಯಾಗಿದ್ದು, ಮೈಸೂರು ಮೂಲದ 8 ಜನರಿಗೆ JN.1 ಸೋಂಕು ಪತ್ತೆಯಾಗಿದೆ. ದೇಶದಲ್ಲಿ JN.1 ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ಗೋವಾ 34, ಮಹಾರಾಷ್ಟ್ರ 9, ಕರ್ನಾಟಕ 8 ಪ್ರಕರಣ ಪತ್ತೆಯಾದ್ರೆ, ಕೇರಳದಲ್ಲಿ 6 ಜನರಿಗೆ JN.1 ವೈರಸ್ ಸೊಂಕು ಕಂಡುಬಂದಿದೆ. ತಮಿಳುನಾಡು 4, ತೆಲಂಗಾಣದಲ್ಲಿ ಇಬ್ಬರಿಗೆ ಸೋಂಕಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
300ರ ಗಡಿ ದಾಟಿದ ಕೊವಿಡ್
ರಾಜ್ಯದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ (ನಿನ್ನೆ) 300ರ ಗಡಿದಾಟಿದೆ. ರಾಜ್ಯದಲ್ಲಿ ಒಟ್ಟು 344 ಸಕ್ರಿಯ ಕೊವಿಡ್ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 95 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಮೈಸೂರಿನಲ್ಲಿ 6, ಮಂಡ್ಯದಲ್ಲಿ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಶಿವಮೊಗ್ಗ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ.