Monday, December 23, 2024

ಚಾರಣ ತೆರಳಿದ್ದ ಯುವಕ ಹೃದಯಘಾತದಿಂದ ನಿಧನ

ಕೊಡಗು:ಚಾರಣಕ್ಕೆ ತೆರಳಿದ್ದ ಯುವಕ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ನಡೆದಿದೆ.

ಹರಿಯಾಣ ಮೂಲದ ಜತಿನ್ (25) ಮೃತಪಟ್ಟ ಯುವಕ. ಜತಿನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದನು. 5 ಮಂದಿ ಸ್ನೇಹಿತರ ಜೊತೆ ತಡಿಯಂಡಮೋಳ್ ಬೆಟ್ಟಕ್ಕೆ ಬಂದಿದ್ದನು. ಬೆಟ್ಟದ ಮೇಲೆ ತಲುಪಿದಾಗ ತೀವ್ರತರಹದ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ಬರಗಾಲ ಬರ್ಲಿ ಅಂತ ರೈತರಿಗೆ ಆಸೆ ಇರುತ್ತೆ: ನಾಲಗೆ ಹರಿಬಿಟ್ಟ ಸಚಿವ ಶಿವಾನಂದ ಪಾಟೀಲ್

ಸ್ಥಳಕ್ಕೆ ನಾಪೋಕ್ಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುರ್ಗಮ ಹಾದಿಯಲ್ಲೆ ಪ್ರವಾಸಿಗನ ಮೃತದೇಹ ಹೊತ್ತು ತಂದಿದ್ದಾರೆ.

RELATED ARTICLES

Related Articles

TRENDING ARTICLES