Wednesday, January 22, 2025

ಈ ದೇಶದಲ್ಲಿ ಜೈ ಶ್ರೀರಾಮ್ ಅಂತ ಮಾತ್ರ ಹೇಳಬೇಕು : ಕಲ್ಲಡ್ಕ ಪ್ರಭಾಕರ್ ಭಟ್

ಮಂಡ್ಯ : ಬೀಬಿ ಮುಸ್ಕಾನ್ (Hijab Girl Muskan) ಅಲ್ಲಾ ಹು ಅಕ್ಬರ್ (Allah Hu Akbar) ಘೋಷಣೆ ಹೇಳಿದ್ಳು. ನೀನು ಮನೆಯಲ್ಲಿ, ಮಸೀದಿಯಲ್ಲಿ ಈ ಘೋಷಣೆ ಹೇಳು. ಈ ದೇಶದಲ್ಲಿ ರಾಮ್ ರಾಮ್ ಅಂತ ಮಾತ್ರ ಹೇಳಬೇಕು. ಈ ದೇಶದಲ್ಲಿ ಇರಬೇಕಾದರೆ ಎಲ್ಲರಂತೆ ಇರಬೇಕು ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗುಡುಗಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿರುವ ಅವರು, ಮುಸ್ಕಾನ್​ಗೆ ಹಣ, ಶಹಬ್ಬಾಶ್‌ಗಿರಿ ಕೊಟ್ಟದ್ದು ಭಯೋತ್ಪಾದಕ ಸಂಘಟನೆ ಅಲ್‌ಖೈದಾ. ಆ ಸಂಘಟನೆ ಜೊತೆ ಸಂಪರ್ಕದಲ್ಲಿರುವ ಹೆಣ್ಣು ಮಗಳು ಮಂಡ್ಯದಲ್ಲಿದ್ದಾಳೆ. ನೀವು ಹುಷಾರಿಗರಬೇಕು. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ. ತಾಕತ್ ಇದ್ರೆ ಅವಳು ಕಾಲೇಜಿಗೆ ಹೋಗಲಿ ಎಂದು ಸವಾಲ್​ ಹಾಕಿದರು.

ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದು ಪ್ರತ್ಯೇಕತೆ ಬೀಜ ಬಿತ್ತುತ್ತೀರಾ..? ಯಾರಲ್ಲೂ ಭೇದಭಾವ ಬರಬಾರದೆಂದು ಸಮವಸ್ತ್ರ ಇದೆ. ಹಿಜಾಬ್ ತರುವ ತಾಕತ್ ಇದೆಯಾ ನಿಮಗೆ..? ತಾಕತ್ ಇದ್ರೆ ಹಿಜಾಬ್ ವಾಪಸ್ ತರುವ ಪ್ರಯತ್ನ ಮಾಡಿ. ನೀವು ಹಿಬಾಜ್ ಧರಿಸಲು ಅವಕಾಶ ನೀಡಿದ್ರೆ, ನಾವು ಕೇಸರಿ ಶಾಲು ಧರಿಸುತ್ತೇವೆ. ಕೇಸರಿ ಟೋಪಿ ಧರಿಸುತ್ತೇವೆ. ಅಲ್ಲಾ ಹು ಅಕ್ಬರ್ ಅಂದರೇ, ನಾವು ಜೈ ಶ್ರೀರಾಮ್ ಎನ್ನುತ್ತೇವೆ. ಶಾಲೆಗಳಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುತ್ತೇವೆ, ತಾಕತ್ತು ಇದ್ದರೇ ತಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES