Monday, December 23, 2024

ಅನಿಮಲ್ ಚಿತ್ರದ ರಶ್ಮಿಕಾ ಮತ್ತು ತೃಪ್ತಿ ದಿಮ್ರಿ ಬೋಲ್ಡ್​ ದೃಶ್ಯಗಳಿಗೆ ಕತ್ತರಿ!

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನ ಮಾಡಿದ ‘ಅನಿಮಲ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ.

ಈ ಸಿನಿಮಾದಲ್ಲಿ ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್​ ಮುಂತಾದವರು ನಟಿಸಿದ್ದಾರೆ. ತೃಪ್ತಿ ದಿಮ್ರಿ ಮತ್ತು ರಣಬೀರ್​ ಕಪೂರ್​ ಅವರು ಸಖತ್​ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀನ್​ಗಳಿಗೆ ಬಾಂಗ್ಲಾದೇಶದ ಸೆನ್ಸಾರ್​ ಮಂಡಳಿ ಕತ್ತರಿ ಹಾಕಿದೆ. ಅಲ್ಲಿನ ಪ್ರೇಕ್ಷಕರಿಗೆ ಇಂಥ ದೃಶ್ಯಗಳು ಸೂಕ್ತವಲ್ಲವೆಂದು ಸೆನ್ಸಾರ್​ ಸದಸ್ಯರು ನಿರ್ಧರಿಸಿದ್ದಾರೆ ಎಂದು ಬಾಲಿವುಡ್​ ಹಂಗಾಮಾ ಜಾಲತಾಣ ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು 104 ಜನರಿಗೆ ಕೊರೊನಾ ಸೋಂಕು ದೃಢ

ಭಾರತದಲ್ಲಿ ಅನಿಮಲ್​ ಸಿನಿಮಾಗೆ ‘ಎ’ ಸರ್ಟಿಫಿಕೇಟ್​ ಸಿಕ್ಕಿತ್ತು. ಚಿತ್ರದಲ್ಲಿನ ಕೆಲವು ಹಸಿ-ಬಿಸಿ ದೃಶ್ಯಗಳ ಕ್ಲೋಸಪ್​ ಶಾಟ್​ಗಳನ್ನು ಡಿಲೀಟ್​ ಮಾಡಿದ ಬಳಿಕವೇ ‘ಎ’ ಸರ್ಟಿಫಿಕೇಟ್​ ನೀಡಲಾಗಿತ್ತು. ಈ ಸಿನಿಮಾದಲ್ಲಿ ಕೆಟ್ಟ ಭಾಷೆಯ ಜೊತೆಗೆ ಅತಿಯಾದ ಕ್ರೌರ್ಯ ಇದೆ. ಆ ಕಾರಣದಿಂದಲೂ ‘ಅನಿಮಲ್​’ ಚಿತ್ರ ಟೀಕೆಗೆ ಒಳಗಾಯಿತು.

RELATED ARTICLES

Related Articles

TRENDING ARTICLES