Monday, November 25, 2024

ದುಪ್ಪಟ್ಟಾದ ಖಾಸಗಿ ಬಸ್‌ ಟಿಕೆಟ್ ದರ ; ಪ್ರಯಾಣಿಕರ ಜೇಬಿಗೆ ಕತ್ತರಿ

ಬೆಂಗಳೂರು: ಕ್ರಿಸ್ಮಸ್, ನ್ಯೂ ಇಯರ್ ಸಲುವಾಗಿ  ಸಾಲು ಸಾಲು ರಜೆಗಳು ಬಂದಿದ್ದು ಊರಿಗೆ ಹೋಗಲು ಇದ್ದವರಿಗೆ  ಬಸ್ ಬುಕ್ಕಿಂಗ್ ಆ್ಯಪ್​ಗಳು ಬಿಗ್ ಶಾಕ್ ಕೊಟ್ಟಿವೆ. 

ಬೆಂಗಳೂರಿನಿಂದ ಬಹುತೇಕ ಊರುಗಳಿಗೆ ಖಾಸಗಿ ಬಸ್​ಗಳು ದುಪ್ಪಟ್ಟು ದರ ನಿಗದಿ ಮಾಡಿವೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್​ಗಳಲ್ಲಿ ಮತ್ತಷ್ಟು ಹೆಚ್ಚಿನ ದರದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬೇಕಿದೆ. ನಿನ್ನೆ, ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ‌ ಹಿನ್ನೆಲೆ ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್​ಗಳ ದರ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: Labourers Death: ಸಂಪ್‌ ಕ್ಲೀನ್‌ ಮಾಡಲು ಇಳಿದ ಇಬ್ಬರು ಕಾರ್ಮಿಕರು ಸಾವು

ಖಾಸಗಿ ಬಸ್ ಬುಕ್ಕಿಂಗ್ ವೆಬ್ ಸೈಟ್ನಲ್ಲಿ ಒನ್ ಟು ಡಬಲ್ ಆದ ಟಿಕೆಟ್ ದರ ವಸೂಲಿಯ ಸುಲಿಗೆ ಮಾಡಿದ್ದಾರೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್​ಗಳು, ನಿರ್ವಾಹಣೆ ವೆಚ್ಚ, GST ಎಂದು ಟಿಕೆಟ್ ದರಕ್ಕಿಂತ ಮೂರುಪಟ್ಟು ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ.

ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್​ಗಳು ಪ್ರತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದೆ. ಬೇಕಾಬಿಟ್ಟಿ ದರ ಹೆಚ್ಚಿಸುತ್ತಿರುವ ಖಾಸಗಿ ಬಸ್​ ಆ್ಯಪ್​ಗಳ ಮೇಲೆ ಕ್ರಮ ಯಾವಾಗ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬಸ್ ದರ ಪಟ್ಟಿ ಇಲ್ಲಿದೆ

  • ​ ಬೆಂಗಳೂರು-ಶಿವಮೊಗ್ಗ 450-650 ರೂ.ರಿಂದ ಈಗ 1000-1400 ಇದೆ.
  • ಬೆಂಗಳೂರು- ಹುಬ್ಬಳಿ 600-850ರೂ. ಇತ್ತು. ಈಗ 1550-2000 ರೂ.
  • ಬೆಂಗಳೂರು-ಮಂಗಳೂರು 600-900 ರೂ. ಈಗ 1500-1800ರೂ.
  • ಬೆಂಗಳೂರು – ಉಡುಪಿ 700-800ರೂ ಯಿಂದ 1600 – 1900 ರೂ.
  • ಬೆಂಗಳೂರು-ಧಾರವಾಡ 650-850 ರೂ ಯಿಂದ 1500-2100 ರೂ ಇದೆ.
  • ಬೆಂಗಳೂರು-ಬೆಳಗಾವಿ 700-900 ರೂ ಇತ್ತು. ಈಗ 1500-2100 ರೂ.ಇದೆ
  • ಬೆಂಗಳೂರು – ದಾವಣಗೆರೆ 450-700 ರೂ ಇತ್ತು. ಈಗ 1200-1650 ರೂ. ಇದೆ.
  • ಬೆಂಗಳೂರು – ಚಿಕ್ಕಮಗಳೂರು 600-650 ರೂ ಇತ್ತು. 1250-1500 ರೂ ಇದೆ.
  • ಬೆಂಗಳೂರು – ಹಾಸನ 650-850 ರೂ ಇತ್ತು. ಈಗ 1600-1850 ರೂ ಇದೆ.
  • ಬೆಂಗಳೂರು-ಕುಮಟಾ 650-750 ರೂ. ಇತ್ತು. 1200-1600 ರೂ ಇದೆ.
  • ಬೆಂಗಳೂರು -ಕಲಬುರಗಿ 850-1000 ರೂ. ಇತ್ತು. 1800-2300 ರೂ ಇದೆ.

 

RELATED ARTICLES

Related Articles

TRENDING ARTICLES