Thursday, December 26, 2024

ಅಂಗನವಾಡಿಯಲ್ಲಿ ಲಸಿಕೆ ಪಡೆದ ಮಗು ಸಾವು!

ಹುಬ್ಬಳ್ಳಿ: ನಗರದ ಉಣಕಲ್​ ನ ಅಂಗನವಾಡಿ ಕೇಂದ್ರದಲ್ಲಿ ಸಿಬ್ಬಂದಿಯಿಂದ ಲಸಿಕೆ ಪಡೆದ ಮರುದಿನ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.‌

ಹುಬ್ಬಳ್ಳಿಯ ಸಾಯಿನಗರದ ಚಿರು ಮೃತ ಬಾಲಕ.  ಪ್ರತಿ ಗುರುವಾರ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕಲಾಗುತ್ತದೆ. ತಮಗೆ ಲಸಿಕೆ ಹಾಸಿಕಲು ಇಷ್ಟವಿಲ್ಲ ಎಂದರೂ ಆಶಾ ಕಾರ್ಯಕರ್ತೆಯರು ಬಲವಂತವಾಗಿ ಲಸಿಕೆ ಹಾಕಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಂದು ವೀರಶೈವ ಲಿಂಗಾಯತ 24ನೇ ಮಹಾಧಿವೇಶನ!

ಗುರುವಾರ ಆಟವಾಡುತ್ತಿದ್ದ ಮಗು ಹಠಾತ್ ಸಾವನ್ನಪ್ಪಿದೆ.  ಗುರುವಾರ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದ ಬಾಲಕನ ಕುಟುಂಬದವರು ಶುಕ್ರವಾರ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿ ಶವವನ್ನು ತಮ್ಮೊಂದಿಗೆ ಕೊಂಡೊಯ್ದರು. ಅದೇ ಲಸಿಕೆಯನ್ನು ಇತರ ಮಕ್ಕಳಿಗೆ ನೀಡಲಾಗಿದೆ, ಅವರಲ್ಲಿ ಯಾರಿಗೂ  ಯಾವುದೇ ತೊಂದರೆ ಆಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ, ಆದರೆ ಘಟನೆಯ ಬಗ್ಗೆ ತನಿಖೆ ನಡೆಸಲು ಇಲಾಖೆ ಸಿದ್ಧವಾಗಿದೆ ಎಂದು ಹೇಳಿದೆ.

 

RELATED ARTICLES

Related Articles

TRENDING ARTICLES