Wednesday, January 29, 2025

ಅವ್ರು RSS ಚಡ್ಡಿ ಹಾಕೋತಾರೆ, ನಾವು ಯಾಕೆ ಅಂತ ಕೇಳಿದ್ವಾ? : ಸಚಿವ ತಂಗಡಗಿ ವ್ಯಂಗ್ಯ

ಕೊಪ್ಪಳ : ಆರ್​ಎಸ್​ಎಸ್ ಚಡ್ಡಿ ಹಾಕಿಕೊಳ್ಳುತ್ತಾ ಇದ್ರು, ನಾವು ಯಾಕೆ ಅಂತ ಕೇಳಿದ್ವಾ? ಅದು ಸಣ್ಣ ಚಡ್ಡಿ, ದೊಡ್ಡ ಚಡ್ಡಿ ಅಂತ ಹೇಳಿದ್ವಾ? ಇಲ್ಲ, ಎಷ್ಟಾದರೂ ಅಗಲದ ಚಡ್ಡಿ ಹಾಕಿಲೊಳ್ಳಲಿ ಎಂದು ಆರ್​ಎಸ್​ಎಸ್ ಚಡ್ಡಿಯ ಬಗ್ಗೆ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಂದೊಂದು ಸಂಸ್ಥೆಯಲ್ಲಿ ಒಂದು ರೀತಿಯ ಬಟ್ಟೆ ಇರುತ್ತೆ. ಹಿಜಾಬ್ ಆದೇಶ ವಾಪಸ್ ಪಡೆಯುತ್ತೇವೆ, ಪಡೆದರೆ ತಪ್ಪೇನು? ಇದನ್ನು ಬಿಜೆಪಿಯವರು ಗೊಂದಲ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ದುಪ್ಪಟ್ಟವನ್ನು ಒಬ್ಬರು ಕೊರಳಲ್ಲಿ ಹಾಕ್ತಾರೆ, ಕೆಲವು ಜನ ತಲೆ ಮೇಲೆ ಹಾಕ್ತಾರೆ. ಅದರಲ್ಲಿ ಏನಿದೆ ತಪ್ಪು? ತಲೆ ಮೇಲೆ ಹಾಕಿಕೊಳ್ಳಬಾರದು ಅಂತ ಹೇಳಿದವರು ಯಾರು? ಶಾಲೆಯ ಸಮವಸ್ತ್ರದಲ್ಲಿರುವ ಬಟ್ಟೆಯನ್ನು ತಲೆ ಮೇಲೆ ಹಾಕಿಕೊಂಡ್ರೆ ತಪ್ಪೇನು? ನಾವು ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ. ಆಮೇಲೆ ನ್ಯಾಯಾಲಯ ಏನು ಸೂಚನೆ ಕೊಡುತ್ತೆ ಅದನ್ನು ಪಾಲಿಸುತ್ತೇವೆ. ವೋಟ್ ಬ್ಯಾಂಕ್ ರಾಜಕಾರಣ ಮಾಡೋದು ಬಿಜೆಪಿ, ನಾವಲ್ಲ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES