Wednesday, January 22, 2025

Horoscope Today: ಇಂದು ವೈಕುಂಠ ಏಕಾದಶಿ: ಯಾವ ರಾಶಿಯವರಿಗೆ ತಿರುಪತಿ ತಿಮ್ಮಪ್ಪನ ಕೃಪೆ  

ಇಂದು ವೈಕುಂಠ ಏಕಾದಶಿ. ಈ ದಿನ ಯಾವ ರಾಶಿಯವರೆಗೆ ಸಿಗಲಿದೆ ತಿಮ್ಮಪ್ಪನ, ರಾಶಿ ಭವಿಷ್ಯ ಹೇಗಿರಲಿದೆ? ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ. 

ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ. ಹಳದಿ ವಸ್ತುಗಳನ್ನು ದಾನ ಮಾಡಿ.

ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಕಸ್ಮಿಕ ಧನಾಗಮನ, ಸ್ವಯಂಕೃತ ಅಪರಾಧದಿಂದ ಸಂಕಷ್ಟ.ಬಿಳಿ ವಸ್ತುಗಳನ್ನು ದಾನ ಮಾಡಿ.

ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ.ತಾಯಿ ಸರಸ್ವತಿಯನ್ನು ಆರಾಧಿಸಿ

ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು.ಶಿವ ಚಾಲೀಸಾ ಪಠಿಸಿ.

ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ದಾಯಾದಿಗಳಿಂದ ತೊಂದರೆ.ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ.

ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ.ಗುರು ಹಿರಿಯರ ಆಶೀರ್ವಾದ ಪಡೆಯಿರಿ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ.ಲಕ್ಷ್ಮಿಗೆ ಖೀರ್ ಅರ್ಪಿಸಿ.

ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ.ತುಳಸಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ ಮತ್ತು ದೀಪವನ್ನು ಬೆಳಗಿಸಿ.

ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.ಶಿವನ ಮಂತ್ರವನ್ನು ಪಠಿಸಿ.

ಮಕರ: ಭಾವನಾತ್ಮಕ ಸೋಲು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ವಿದ್ಯಾಭ್ಯಾಸದಿಂದ ನಿದ್ರಾಭಂಗ.ಬಡವರಿಗೆ ಆಹಾರ ದಾನ ಮಾಡಿ.

ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ಆಲೋಚನೆಗಳಲ್ಲಿ ಯಶಸ್ಸು.ಯೋಗ ಪ್ರಾಣಾಯಾಮ ಅಭ್ಯಾಸ ಮಾಡಿ.

ಮೀನ: ಉದ್ಯೋಗದಲ್ಲಿ ಒತ್ತಡಗಳು, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ, ಸೋಲಿನ ಚಿಂತೆ.ತಾಯಿ ಹಸುವಿಗೆ ಮೊದಲ ರೊಟ್ಟಿ ತಿನ್ನಿಸಿ.

ಪಂಚಾಂಗ:

ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲಪಕ್ಷ,
ಏಕಾದಶಿ/ಉಪರಿ ದ್ವಾದಶಿ,
ಶನಿವಾರ, ಭರಣಿ ನಕ್ಷತ್ರ
ರಾಹುಕಾಲ: 09:30 ರಿಂದ 10:56
ಗುಳಿಕಕಾಲ: 06:39 ರಿಂದ 08:04
ಯಮಗಂಡಕಾಲ: 01:47 ರಿಂದ 03:13

 

RELATED ARTICLES

Related Articles

TRENDING ARTICLES