Wednesday, January 22, 2025

ಮುಂಬೈಗೆ ಬಿಗ್ ಶಾಕ್.. ಐಪಿಎಲ್​ನಿಂದ ಹಾರ್ದಿಕ್ ಪಾಂಡ್ಯ ಔಟ್!

ಬೆಂಗಳೂರು : ಮುಂಬೈ ಇಂಡಿಯನ್ಸ್​ಗೆ ಐಪಿಎಲ್-2024 ಆರಂಭಕ್ಕೂ ಮುನ್ನವೇ ಬಿಗ್ ಶಾಕ್ ಎದುರಾಗಿದೆ.

ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನ ಸ್ಥಾನಕ್ಕೆ ತಂದು ಕೂರಿಸಿದ್ದ ಮುಂಬೈಗೆ ಇದೀಗ ದೊಡ್ಡ ಆಘಾತ ಎದುರಾಗುವ ಸಾಧ್ಯತೆಯಿದೆ.

ಪಾದದ ಗಾಯದಿಂದ ಬಳಲುತ್ತಿರುವ ಪಾಂಡ್ಯ ಅವರು ಐಪಿಎಲ್​-2024ರಲ್ಲಿ ಆಡುವ ಸಾಧ್ಯತೆಯಿಲ್ಲ. ಇದು ಮುಂಬೈ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ. ಮುಂಬರುವ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ಪಾಂಡ್ಯ ಆಡುವುದೂ ಅನುಮಾನ.

ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ

ವಿಶ್ವಕಪ್ ಟೂರ್ನಿಯಲ್ಲಿ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ಬಳಿಕ ತಂಡದಿಂದ ಹೊರಗುಳಿದಿದ್ದರು. ಇನ್ನೂ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾರ್ದಿಕ್ ಪಾಂಡ್ಯ ಫಿಟ್​ನೆಸ್ ಕುರಿತು ಇನ್ನೂ ಯಾವುದೇ ಅಪ್​ಡೇಟ್​ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

RELATED ARTICLES

Related Articles

TRENDING ARTICLES