Sunday, January 19, 2025

Viral Video: ಪನ್ನೀರು ಕರಿ ಇಲ್ಲ ಎಂದು ಘನಘೋರ ಜಗಳ

Viral News: ಮದುವೆಯೆಂದರೆ ಮೋಜು-ಮಸ್ತಿ ಸಂತೋಷ ಅಷ್ಟೇ ಅಲ್ಲ.ಕೆಲವೊಮ್ಮೆ ಜಗಳ, ಗೊಂದಲಗಳು ಎರಡೂ ಮನೆಯವರನ್ನು ಕೆರಳಿಸುತ್ತವೆ.ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಪನ್ನೀರ್ ಕರಿ ಇಲ್ಲದ ಕಾರಣ ಅತಿಥಿಗಳು ಜಗಳವಾಡಿದ್ದಾರೆ.

ಕುರ್ಚಿಗಳನ್ನು ಎಸೆದು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆದರೆ ಇದು ಎಲ್ಲಿ ನಡೆದಿದೆ ಎಂಬುದು ಗೊತ್ತಾಗಿಲ್ಲ. ಅದರೆ  ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದ್ದು, ನೆಟ್ಟಿಗರು ರಿಯಾಕ್ಟ್ ಮಾಡುತ್ತಿದ್ದಾರೆ. ಪನ್ನೀರ್‌ಗಾಗಿ 3ನೇ ಮಹಾಯುದ್ಧ ನಡೆಯಬಹುದು ಎಂದು ಕೂಡ ಕಮೆಂಟ್ ಮಾಡಿದ್ದಾರೆ.

ಮದುವೆ ಮನೆ ಎನ್ನುವುದನ್ನು ಮರೆತು ಪರಸ್ಪರ ಜಗಳದಲ್ಲಿ ತೊಡಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಮದುವೆ ಸಮಯದಲ್ಲಿ ಬಡಿಸಿದ ‘ಮಾತರ್ ಪನೀರ್’ನಲ್ಲಿ ಪನೀರ್ ತುಂಡುಗಳು ಕಡಿಮೆ ಇವೆ ಎನ್ನುವ ಕಾರಣಕ್ಕೆ ಮದುವೆ ಮನೆ ರಣಾಂಗಣವಾಗಿ ಬದಲಾಗಿದೆ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.

 

RELATED ARTICLES

Related Articles

TRENDING ARTICLES