Wednesday, January 22, 2025

‘ಕಾಟೇರ’ ಚಿತ್ರಕ್ಕೆ ಸೆನ್ಸಾರ್​ನಿಂದ ಯುಎ ಸರ್ಟಿಫಿಕೇಟ್

ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾಗೆ ಯುಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ.

ಇದೇ ಡಿಸೆಂಬರ್ 29ರಂದು ‘ಕಾಟೇರ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಕಾಟೇರ’ ನೋಡಿ ಸೆನ್ಸಾರ್‌ ಮಂಡಳಿ ಮೆಚ್ಚಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ತರುಣ್ ಸುಧೀರ್ ಅವರು, ಕಾಟೇರ ಚಿತ್ರಕ್ಕೆ ಸೆನ್ಸಾರ್​ ಮಂಡಳಿ ಯುಎ ಸರ್ಟಿಫಿಕೇಟ್ ನೀಡಿದೆ. ಕನ್ನಡ ಸಿನಿ ಪ್ರೇಕ್ಷಕರು ಹಬ್ಬ ಮಾಡಲು ಸಿದ್ಧರಾಗಿ. ಇದೇ ಡಿಸೆಂಬರ್ 29ರಂದು (ಒಂದು ವಾರ) ನಿಮ್ಮ ‘ಕಾಟೇರ’ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

‘ಕಾಟೇರ’ ಚಿತ್ರ ಈಗಾಗಲೇ ಎರಡು ಹಾಡು ಹಾಗೂ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಟ ದರ್ಶನ್​ಗೆ ಜೊತೆಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಅಭಿನಯಿಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೌಕ, ರಾಬರ್ಟ್​ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತೊಮ್ಮೆ ದರ್ಶನ್​ಗೆ ಆಕ್ಷನ್​ ಕಟ್ ಹೇಳಿದ್ದಾರೆ. ಇದೇ ಡಿಸೆಂಬರ್ 29ರಂದು ‘ಕಾಟೇರ’ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ನಾಳೆ ಮಂಡ್ಯದಲ್ಲಿ ‘ರೈತರ ಹಾಡು’ ಬಿಡುಗಡೆ

ರೈತರ ದಿನದ ಅಂಗವಾಗಿ ನಾಳೆ (ಡಿಸೆಂಬರ್ 23) ಸಕ್ಕರೆ ನಾಡು ಮಂಡ್ಯದಲ್ಲಿ ‘ಕಾಟೇರ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ರೈತರ ದಿನದಂದು ನಮ್ಮ ಕಾಟೇರ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಂಡ್ಯದಲ್ಲಿ ನಡೆಯಲಿದೆ. ಈ ವಿಶೇಷ ದಿನದಂದೇ ‘ಕಾಟೇರ’ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ. ಮಂಡ್ಯದ ಬಾಯ್ಸ್ ಕಾಲೇಜ್ ಗ್ರೌಂಡ್​ನಲ್ಲಿ ಸಂಜೆ 5 ಗಂಟೆಗೆ ಸಮಾರಂಭ ಶುರುವಾಗಲಿದೆ. ಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ಎಂದು ನಟ ದರ್ಶನ್ ಆಹ್ವಾನ ನೀಡಿದ್ದಾರೆ.

RELATED ARTICLES

Related Articles

TRENDING ARTICLES