Sunday, January 19, 2025

ಸಲಾರ್​ ಸಿನಿಮಾ ನೋಡಿ ಪ್ರಭಾಸ್‌ ಅಭಿನಯ ಸೂಪರ್‌ ಡೂಪರ್‌ ಅಂದ್ರು ಅಭಿಮಾನಿಗಳು 

ಬೆಂಗಳೂರು: ವಿಶ್ವಾದ್ಯಂತ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಇಂದು ರಿಲೀಸ್ ಆದ ಬಳಿಕ ಪ್ರಭಾಸ್‌ ಫ್ಯಾನ್ಸ್‌ ಥಿಯೇಟರ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಇದೀಗ ಪ್ರೇಕ್ಷಕರು ಸಲಾರ್ ವಿಮರ್ಶೆಯನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗೂ ಪ್ರಭಾಸ್ ಅವರ ಅಭಿನಯಕ್ಕಾಗಿ ಹಾಡಿ ಹೊಗಳುತ್ತಿದ್ದಾರೆ. ವ್ಯಾಪಾರ ತಜ್ಞ ಮನೋಬಾಲಾ ವಿ ಅವರು ಸಲಾರ್ ವಿಮರ್ಶೆಯನ್ನು ಬರೆದು, ಪೃಥ್ವಿರಾಜ್ ಸುಕುಮಾರನ್ ಅವರ ನಟನೆಯನ್ನು ಶ್ಲಾಘಿಸಿದರು.

ಇದನ್ನೂ ಓದಿ: Salaar Movie: ಕರ್ನಾಟಕದಲ್ಲಿ ಸಲಾರ್ ಕ್ರೇಜ್ ಹೇಗಿದೆ ಗೊತ್ತಾ..?

ಮನೋಬಾಲಾ ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ, ʻʻಪ್ರಭಾಸ್ ದೇವನಾಗಿ ಮಿಂಚಿದ್ದಾರೆ. ಹ್ಯಾಟ್ರಿಕ್ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ಬಳಿಕ ಪ್ರಶಾಂತ್‌ ನೀಲ್‌ ಈ ಸಿನಿಮಾದೊಂದಿಗೆ ಯಶಸ್ಸನ್ನು ಮುಂದುವರಿಸುವಲ್ಲಿ ಗೆದ್ದಿದ್ದಾರೆ.
ವರ್ಧರಾಜ ಮನ್ನಾರ್ ಪಾತ್ರಕ್ಕೆ ಪೃಥ್ವಿರಾಜ್ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಜಗಪತಿ ಬಾಬು ಅವರು ತಂದೆಯಾಗಿ ಮಿಂಚಿದ್ದಾರೆ. ಹಿನ್ನೆಲೆ ಧ್ವನಿ ಅದ್ಭುತʼʼಎಂದು ಬರೆದುಕೊಂಡಿದ್ದಾರೆ.

 

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ʻʻಪ್ರಭಾಸ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಸಲಾರ್‌ ಕೂಡ ಒಂದಾಗಿದೆ. ಕ್ಲೈಮ್ಯಾಕ್ಸ್ ಖುಷಿ ಕೊಡುತ್ತದೆ. ಪೃಥ್ವಿರಾಜ್ ನಟನೆ ಖುಷಿ ಕೊಡುತ್ತದೆ.

ಯಶ್‌ ಬಾಸ್‌ ಅತಿಥಿ ಪಾತ್ರ ಅಚ್ಚರಿಯ ಪ್ಯಾಕೇಜ್ ಆಗಿದೆ. ಕ್ಲೈಮ್ಯಾಕ್ಸ್ ಇನ್ನೂ ವಿಶೇಷವಾಗಿಸುತ್ತದೆ, ”ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಬಾಹುಬಲಿ ನಂತರ ಪ್ರಭಾಸ್‌ ಈ ಸಿನಿಮಾ ಮೂಲಕ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಅನೇಕರು ಚಿತ್ರವನ್ನು ಹೊಗಳಿದ್ದರೂ, ಕೆಲವರು ಬಿಜಿಎಂ (ಹಿನ್ನೆಲೆ ಧ್ವನಿ) ಕಡಿಮೆಯಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES