Friday, November 22, 2024

Covid 19 Alert : ಜನವರಿಯಲ್ಲಿ ಕೊರೊನಾ ಸ್ಫೋಟ ಸಾಧ್ಯತೆ; 4 ಚಿತಾಗಾರ ಮೀಸಲು!

ಬೆಂಗಳೂರು: 2024ರ ಜನವರಿಯಲ್ಲಿ ಕೊರೊನಾ ರಾಜ್ಯದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ.

ಹೌದು,ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದರೆ ಕಳೆದ ಬಾರಿಯಂತೆ ಚಿತಾಗಾರಗಳ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ನಾಲ್ಕು ಚಿತಾಗಾರಗಳನ್ನು ಮೀಸಲಿಡಲು ರಾಜ್ಯಸರ್ಕಾರ ಮುಂದಾಗಿದೆ.

4 ಚಿತಾಗಾರ ಮೀಸಲು

ಆಕ್ಸಿಜನ್‌ ಪ್ಲ್ಯಾಂಟ್‌ಗಳನ್ನು ನಿರ್ವಹಿಸಿ ಸುಸ್ಥಿತಿಯಲ್ಲಿಡುವುದು, ಸೋಂಕಿತರನ್ನು ಚಿಕಿತ್ಸೆಗೆ ಕರೆದೊಯ್ಯಲು ವಾರ್ಡ್ ಗೆ ಎರಡು ಅಥವಾ ಮೂರು ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡುವುದು, ಮೃತಪಟ್ಟರನ್ನ ಅಂತ್ಯಸಂಸ್ಕಾರದ ಸ್ಥಳಕ್ಕೆ ತೆಗೆದುಕೊಂಡು ಹೋಗಲು ವಲಯಕ್ಕೊಂದು ಆ್ಯಂಬುಲೆನ್ಸ್.. ಜತೆಗೆ ನಗರದ ನಾಲ್ಕು ಚಿತ್ತಾಗಾರಗಳನ್ನು ಕೊರೊನಾ ಮೃತಪಟ್ಟರಿಗೆ ಮೀಸಲು ನಿರ್ಧರಿಸಲಾಗಿದೆ.

ಯಾವ್ಯಾವ ಚಿತಾಗಾರ ಮೀಸಲು

ಚಿತಾಗಾರಗಳು ಯಾವುದು ಎನ್ನುವುದು ಕೂಡಾ ನಿರ್ಧಾರವಾಗಿದ್ದು, ಬನಶಂಕರಿ ಚಿತಾಗಾರ, ಮೇಡಿಅಗ್ರಹಾರ, ಹೆಬ್ಬಾಳ, ಸುಮ್ಮನಹಳ್ಳಿ ಚಿತಾಗಾರ ಕೋವಿಡ್‌ನಿಂದ ಮೃತಪಟ್ಟವರಿಗೆ ಮೀಸಲು ಇಡಲು ನಿರ್ಧರಿಸಲಾಗಿದೆ. ಕಳೆದ ಬಾರಿ ಚಿತಾಗಾರ ಇಲ್ಲದೆ ಅಂತ್ಯಸಂಸ್ಕಾರಕ್ಕೆ ಅಲೆದಾಡಿದ ಕಾರಣಕ್ಕೆ ಈ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಪ್ರತಿ ವಲಯದಲ್ಲೂ ವಾರ್‌ ರೂಂ

ಡಿಸೆಂಬರ್ ಅಂತ್ಯಕ್ಕೆ ಪ್ರತಿ ವಲಯದಲ್ಲೂ ಕೋವಿಡ್ ವಾರ್ ರೂಮ್ ತೆರೆಯಲು ತೀರ್ಮಾನ ಮಾಡಲಾಗಿದೆ. ಕೊರೊನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ, ಆ್ಯಂಬುಲೆನ್ಸ್ ವ್ಯವಸ್ಥೆ, ಕೋವಿಡ್ ಟೆಸ್ಟ್ ಮಾಹಿತಿ ಸಂಗ್ರಹಕ್ಕೆ ವಾರ್ ರೂಮ್ ನೆರವಾಗಲಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಕೂಡಾ ಬಿಬಿಎಂಪಿ ವಾರ್‌ ರೂಂಗಳನ್ನು ಆರಂಭಿಸಿತ್ತು. ಈ ಬಾರಿ ಇನ್ನಷ್ಟು ಸುವ್ಯವಸ್ಥಿತವಾಗಿ ಮಾಡಲು ಬಿಬಿಎಂಪಿ ಮೊದಲೇ ಸಿದ್ಧತೆ ನಡೆಸಿದೆ.

ಗೈಡ್‌ಲೈನ್ಸ್‌ ಕೂಡಾ ಬದಲಾಗುವ ಸಾಧ್ಯತೆ

ಒಂದು ವೇಳೆ ಜನವರಿಯಲ್ಲಿ ಕೊರೊನಾ ಸ್ಫೋಟಗೊಳ್ಳೂವುದು ನಿಶ್ಚಿತ ಎಂದಾದರೆ ಈಗ ಜಾರಿಯಲ್ಲಿರುವ ಮಾರ್ಗ ಸೂಚಿಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಂಡುಬಂದಿದೆ. ಅದರಲ್ಲೂ ಒಂದು ವೇಳೆ ಕೊರೊನಾ ಉಪತಳಿ ಜೆಎನ್‌.1 ಪತ್ತೆ ಹೆಚ್ಚಾದರೆ ಕಠಿಣ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ.

ಏನೇನು ಮಾರ್ಗಸೂಚಿ ಜಾರಿಗೆ ಬರಬಹುದು?

  1. ಮಕ್ಕಳು ಶಾಲೆಗಳಿಗೆ ಬರುವಾಗ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ.
  2. ಜ್ವರ ಹಾಗೂ ಕೆಮ್ಮು ಇರುವ ಮಕ್ಕಳಿಗೆ ರಜೆ ನೀಡಲು ಸೂಚನೆ
  3. ಕೊರೊನಾ ಲಕ್ಷಣಗಳಿರುವ ಮಕ್ಕಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ.
  4. ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ.
  5. ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ.
  6. ಥಿಯೇಟರ್ ಒಳಗೆ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ.
  7. ಮಾರುಕಟ್ಟೆ, ಹೋಟೆಲ್, ಮಾಲ್ ಗಳಿಗೂ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ.
  8. ಮೆಟ್ರೋ ಸಂಚಾರದ ವೇಳೆ ಮಾಸ್ಕ್‌ ಕಡ್ಡಾಯ ಮಾಡಬಹುದು.

RELATED ARTICLES

Related Articles

TRENDING ARTICLES