ಬೆಂಗಳೂರು : ಭಾರತದಲ್ಲಿ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ತಾರತಮ್ಯ ಭಾವನೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಕೇಳಿದಾಗ ಅವರು, ಭಾರತೀಯ ಸಮಾಜವು ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಭಾವನೆ ಹೊಂದಿಲ್ಲ. ದೇಶದ ಪಾರ್ಸಿ ಸಮುದಾಯದ ಆರ್ಥಿಕ ಯಶಸ್ಸನ್ನು ಶ್ಲಾಘಿಸಿದ ಮೋದಿ ಪ್ರಸ್ತುತ ಸಮುದಾಯವನ್ನು ಭಾರತದಲ್ಲಿ ವಾಸಿಸುವ ಧಾರ್ಮಿಕ ಸೂಕ್ಷ್ಮ-ಅಲ್ಪಸಂಖ್ಯಾತರು ಎಂದು ಹೇಳಿದ್ದಾರೆ.
ಜಗತ್ತಿನ ಬೇರೆಡೆ ಕಿರುಕುಳವನ್ನು ಎದುರಿಸುತ್ತಿದ್ದರೂ, ಪಾರ್ಸಿಗಳು ಭಾರತದಲ್ಲಿ ಸುರಕ್ಷಿತ ಧಾಮವನ್ನು ಕಂಡುಕೊಂಡಿದ್ದಾರೆ. ಅವರು ಸಂತೋಷದಿಂದ ಬದುಕುತ್ತಿದ್ದಾರೆ ಎಂದು ಹೇಳಿದ ಮೋದಿ, ದೇಶದ ಸರಿಸುಮಾರು 200 ಮಿಲಿಯನ್ ಮುಸ್ಲಿಮರ ಬಗ್ಗೆ ಯಾವುದೇ ನೇರ ಉಲ್ಲೇಖವನ್ನು ಮಾಡಲಿಲ್ಲ.