Monday, January 27, 2025

ವಿಶ್ವದಾದ್ಯಂತ ‘ಎಕ್ಸ್’ ಸರ್ವರ್​ ಡೌನ್​ : ಬಳಕೆದಾರರ ಪರದಾಟ 

ಬೆಂಗಳೂರು: ಎಲಾನ್​ ಮಸ್ಕ್​ ಒಡೆತನದ ಎಕ್ಸ್​(ಟ್ವಿಟ್ಟರ್​)ನಲ್ಲಿ ಸಮಸ್ಯೆ ಕಂಡುಬಂದಿದ್ದು, ಬಳಕೆದಾರರು ಇದರಿಂದ ಪರದಾಡಿದ್ದಾರೆ. ಎಕ್ಸ್​ನಲ್ಲಿ ಯೂಸರ್​ ಟೈಮ್​ಲೈನ್​ ಗೋಚರಿಸದೇ ಟ್ವಿಟ್ಟಿಗರಿಗೆ ನಿರಾಸೆಯುಂಟಾಗಿದೆ.

ವಿಶ್ವದಾದ್ಯಂತ ಕೋಟ್ಯಾಂತರ ಜನರು ಟ್ವಿಟ್ಟರ್​ ಬಳಸುತ್ತಿದ್ದಾರೆ. ಅನೇಕರು ಇದರ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಪಡೆಯುತ್ತಾರೆ. ಅಷ್ಟೇ ಏಕೆ ವಿಶ್ವದ ಪ್ರಮುಖ ನಾಯಕರು ಕೂಡ ಟ್ವಿಟ್ಟರ್​ನಲ್ಲಿ ಖಾತೆ ಹೊಂದಿದ್ದಾರೆ. ಆದರೆ ಗುರುವಾರದಂದು ಬೆಳಗ್ಗಿನಿಂದಲೇ ಟ್ವಿಟ್ಟರ್​ನಲ್ಲಿ ಸಮಸ್ಯೆ ಕಾಡಲಾರಂಭಿಸಿದೆ.

ಇದನ್ನೂ ಓದಿ: Love affair : ಪ್ರಿಯಕರ ಪೋಲಿಸಪ್ಪನನ್ನ ಬೆಂಕಿ ಹಚ್ಚಿಕೊಂದ ಲೇಡಿ ಹೋಂ ಗಾರ್ಡ್ : ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಇನ್ನು ಟ್ವಿಟ್ಟರ್​ನಲ್ಲಿ ಕಾಣಿಸಿಕೊಂಡ ಸಮಸ್ಯೆ ಬಗ್ಗೆ ಅನೇಕರು ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇಂಥಾ ಸಮಸ್ಯೆ ನಿಮಗೂ ಕಾಡುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಇದಾವುದಕ್ಕೆ ಟ್ವಿಟ್ಟರ್​ ಉತ್ತರಿಸದೇ ಇರುವುದು ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ.

 

RELATED ARTICLES

Related Articles

TRENDING ARTICLES