Sunday, December 22, 2024

ಗ್ರಾಮಸ್ಥರ ಮೇಲೆ ಲಾಂಗ್ ಬೀಸಿದ ಯುವಕ!

ರಾಮನಗರ: ಹಾಲು ಹಾಕುವ ವಿಚಾರಕ್ಕೆ ಗಲಾಟೆ ನಡೆದ ಹಿನ್ನೆಲೆ ಗ್ರಾಮಸ್ಥರ ಮೇಲೆ ಯುವಕನೋರ್ವ ಲಾಂಗ್ ಬೀಸಿದ ಘಟನೆ ಮಾಗಡಿ ತಾಲೂಕಿನ ಚಿಕ್ಕಮುದಿಗೆರೆಯಲ್ಲಿ ನಡೆದಿದೆ.

ಗಣೇಶ್​ (34) ಲಾಂಗ್​ ಬೀಸಿದ ಯುವಕ, ಸರತಿಸಾಲಿನಲ್ಲಿ ನಿಂತು ಹಾಲು ಹಾಕುವ ವಿಚಾರಕ್ಕೆ ಮಹಿಳೆಯೊಂದಿಗೆ ಗಲಾಟೆ ಮಾಡಿಕೊಂಡ ಯುವಕ, ಗ್ರಾಮಸ್ಥರು ಈ ಕುರಿತು ತನ್ನೊಟ್ಟಿಗೆ ಗಲಾಟೆ ಮಾಡುತ್ತಾರೆಂದು ತಿಳಿದು ಲಾಂಗ್​ ತಂದಿದ್ದಾನೆ. ಗಲಾಟೆ ಬಗ್ಗೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಯುವಕ ಲಾಂಗ್​ ನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಕ್ರಿಸ್ಮಸ್​ ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTC ವತಿಯಿಂದ ಸಿಹಿಸುದ್ದಿ!

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾಡಗಿ ತಾಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES