Wednesday, January 22, 2025

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನನ್ನ ಮಗನಿಗೆ ಟಿಕೆಟ್ ಕೇಳಿದ್ದೇನೆ : ಶಾಸಕ ವಿಶ್ವನಾಥ್

ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನನ್ನ ಮಗನಿಗೆ ಟಿಕೆಟ್ ಕೊಡುವಂತೆ ಕೇಳಿದ್ದೇನೆ. ಸರ್ವೆ ಮಾಡಲಿ, ಯಾರಿಗೆ ಟಿಕೆಟ್ ಕೊಟ್ಟರೂ ಪರವಾಗಿಲ್ಲ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಲೋಕಸಭೆ ಎಲೆಕ್ಷನ್​ಗೆ ನಿಲ್ಲು ಅಂತ ಹೇಳ್ದಾಗ ನಾನು ಓಡೋಗಿದ್ದೆ ಎಂದು ತಿಳಿಸಿದರು.

ನಾಯಕತ್ವದ ಕೊರತೆ ನಮಗಿಲ್ಲ. ನಾನು ದೆಹಲಿಗೆ ಹೋಗೋ‌ ಪ್ರಮೇಯ ಬಂದಿಲ್ಲ. ನನಗೂ ದೆಹಲಿಗೂ ಟಚ್ ಇಲ್ಲ. ಯಾರೋ ದೆಹಲಿ ಯಾತ್ರೆ ಹೋಗ್ತಾರೆ, ಹೈಕಮಾಂಡ್ ನಾಯಕರು ಸಿಗ್ತಾರಾ? ನಮ್ಮ ವರಿಷ್ಠರು ಬಹಳ ಬ್ಯುಸಿ ಇರ್ತಾರೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.

ಮತ್ತೆ ಅಶೋಕ್ ವಿರುದ್ಧ ಅಸಮಾಧಾನ

ಬೆಳಗಾವಿ ಅಧಿವೇಶನ ನನಗೆ ತೃಪ್ತಿ ತಂದಿಲ್ಲ. ಸಾಕಷ್ಟು ವಿಚಾರಗಳ ಬಗ್ಗೆ ನಾವು ಧ್ವನಿ ಎತ್ತಬೇಕಿತ್ತು. ವಿಪಕ್ಷವಾಗಿ ನಮ್ಮ ನಿರ್ವಹಣೆ ಸರಿಯಾಗಿರಲಿಲ್ಲ. ಇದು ನನಗೆ ಸಮಾಧಾನ ತಂದಿಲ್ಲ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿತ್ತು. ಕೆಲವೊಂದು ಕಡೆ ನಾವು ಕಾಂಪ್ರಮೈಸ್ ಆಗಿದ್ದೇವೆ. ಉತ್ತರ ಕರ್ನಾಟಕ ಚರ್ಚೆ ಅಂತ ಕಾಂಪ್ರಮೈಸ್ ಆಗಿದ್ದೇವೆ. ಈ ಕಾಂಗ್ರೆಸ್​ ಸರ್ಕಾರ ಬಂದು ಏಳು ತಿಂಗಳು‌ ಆಗಿದೆ. ಇದು ಯಾರದೇ ವೈಫಲ್ಯ ಅಲ್ಲ. ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇನ್ನೂ ಸುಧಾರಣೆ ಆಗಬೇಕಿದೆ ಎಂದು ಅಸಮಾಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES