Friday, January 3, 2025

ವಿವಾಹಿತ ಆಂಟಿಯೊಂದಿಗೆ ಯುವಕನ ಸಲುಗೆ ಫೋಟೋ ವೈರಲ್ : ಮನನೊಂದು ಇಬ್ಬರೂ ನೇಣಿಗೆ ಶರಣು

ಮೈಸೂರು : ವಿವಾಹಿತ ಮಹಿಳೆಯೊಂದಿಗೆ ಯುವಕನೋರ್ವ ಸಲುಗೆ ಬೆಳೆಸಿದ್ದು ಇದೀಗ ಅವರಿಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿವಾಹಿತ ಮಹಿಳೆ ಹಾಗೂ ಯುವಕನ ಫೋಟೋ ವೈರಲ್ ಆಗಿತ್ತು. ಇದರಿಂದ ಮನನೊಂದ ಆ ಮಹಿಳೆ ಮತ್ತು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಕಲ್ಕುಣಿಗೆಯಲ್ಲಿ ನಡೆದಿದೆ.

ಹುಣಸೂರು ಪಟ್ಟಣದ ಕಲ್ಕುಣಿಗೆ ನಿವಾಸಿಗಳಾದ ಶೃತಿ (28) ಹಾಗೂ ಮುರಳಿ (20) ಆತ್ಮಹತ್ಯೆಗೆ ಶರಣಾದವರು. ಮೃತ ಮುರಳಿ ವಿವಾಹಿತ ಶೃತಿ ಜೊತೆ ಸಲುಗೆಯಿಂದ ಇದ್ದ ಫೋಟೋ ಸ್ಟೇಟಸ್​ನಲ್ಲಿ ಇಟ್ಟಿದ್ದೇ ಇವರ ಸಾವಿಗೆ ಕಾರಣವಾಗಿದೆ.

ಎರಡು ಕುಟುಂಬಗಳ ನಡುವೆ ಗಲಾಟೆ

ಮೃತ ಮುರಳಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ. ಈತ ಮೃತ ಶೃತಿ ಜೊತೆ ಇದ್ದ ಫೋಟೋವನ್ನು ಸ್ಟೇಟಸ್​ನಲ್ಲಿ ಇಟ್ಟುಕೊಂಡಿದ್ದ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಷಯ ಶೃತಿ ಹಾಗೂ ಮುರಳಿ ಮನೆಯವರಿಗೆ ತಿಳಿದಿದೆ. ಈ ಸಂಬಂಧ ಇಬ್ಬರ ಕುಟುಂಬದ ಮಧ್ಯೆ ಜಗಳ ಆಗಿತ್ತು.

ಹೆದರಿ ಯುವಕನೂ ಆತ್ಮಹತ್ಯೆಗೆ ಶರಣು

ಫೋಟೋ ಕಣ್ಣಿಗೆ ಬೀಳುತ್ತಿದ್ದಂತೆ ಮನನೊಂದ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಆತ್ಮಹತ್ಯೆ ಬೆನ್ನಲ್ಲೇ ಹೆದರಿ ಯುವಕ ಮುರಳಿ ಕೂಡ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬದವರು ಪರಸ್ಪರ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES