Tuesday, December 24, 2024

ಮೋದಿಗೆ ಏಕಪಕ್ಷೀಯ ಆಡಳಿತ ನಡೆಸುವ ಆಸೆ : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ದೇಶದಲ್ಲಿ ಏಕ ಪಕ್ಷದ (ಏಕಪಕ್ಷೀಯ) ಆಡಳಿತ ನಡೆಸಲು ಬಯಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಸಂಸತ್ತಿನಲ್ಲಿ ವಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.

ಸಂಸದರ ಅಮಾನತು ಖಂಡಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಲೋಕಸಭೆಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಸದನದೊಳಗೆ ನುಗ್ಗಿದ್ದರು. ಒಂದು ವೇಳೆ ಸಂಸತ್ತಿಗೆ ಬಿಗಿ ಭದ್ರತೆ ಒದಗಿಸಿದ್ದೇ ಆದರೆ ಆರೋಪಿಗಳು ಒಳಗೆ ನುಸುಳಿದ್ದು ಹೇಗೆ?ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಉಂಟಾದ ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದರಿಂದ 141 ಸಂಸದರನ್ನು ಅಮಾನತು ಮಾಡಲಾಗಿದೆ. ಆದರೆ, ಆರೋಪಿಗೆ ಪಾಸ್ ನೀಡಿದ್ದ ತಮ್ಮದೇ ಪಕ್ಷದ ಸಂಸದರ ಬಗ್ಗೆ ಬಿಜೆಪಿಯವರು ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಗುಪ್ತಚರ ಇಲಾಖೆಯ ಬಹು ದೊಡ್ಡ ವೈಫಲ್ಯ

ತಿಂಗಳುಗಳಿಂದ ಯೋಜನೆ ರೂಪಿಸುತ್ತಿದ್ದ ಆರೋಪಿಗಳ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲವೇಕೆ? ಇದು ಗುಪ್ತಚರ ಇಲಾಖೆಯ ಬಹು ದೊಡ್ಡ ವೈಫಲ್ಯ. ಭದ್ರತಾ ಲೋಪಕ್ಕೆ ಹಿರಿಯ ಅಧಿಕಾರಿಗಳನ್ನು ಹೊಣೆ ಮಾಡಲಿಲ್ಲವೇಕೆ? ಎಂದು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES